Monday, September 21, 2026

BDA Apartments

ಈ ಬಾರಿಯೂ ಜೆಡಿಎಸ್-ಬಿಜೆಪಿ ಮೈತ್ರಿಯನ್ನ ಜನರು ಒಪ್ಪಲ್ಲ: ಸಚಿವ ಚಲುವರಾಯಸ್ವಾ...
Home Front Page ಈ ಬಾರಿಯೂ ಜೆಡಿಎಸ್-ಬಿಜೆಪಿ ಮೈತ್ರಿಯನ್ನ ಜನರು ಒಪ್ಪಲ್ಲ: ಸಚಿವ ಚಲುವರಾಯಸ್ವಾಮಿ.

ಈ ಬಾರಿಯೂ ಜೆಡಿಎಸ್-ಬಿಜೆಪಿ ಮೈತ್ರಿಯನ್ನ ಜನರು ಒಪ್ಪಲ್ಲ: ಸಚಿವ ಚಲುವರಾಯಸ್ವಾಮಿ.

ಹಾಸನ,ಏಪ್ರಿಲ್,8,2024 (www.justkannada.in): ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮಾಜಿ ಶಾಸಕ ಪ್ರೀತಂಗೌಡ ಪ್ರಚಾರಕ್ಕೆ ಬಾರದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಈ ಬಾರಿಯೂ ಜೆಡಿಎಸ್-ಬಿಜೆಪಿ ಮೈತ್ರಿಯನ್ನ ಜನರು ಒಪ್ಪಲ್ಲ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಇಂದು ಮಾತನಾಡಿದ ಚಲುವರಾಯಸ್ವಾಮಿ, ಅಂದು   ಜೆಡಿಎಸ್ ನವರು ಬಿಎಸ್ ಯಡಿಯೂರಪ್ಪಗೆ ಅಧಿಕಾರ ಕೊಟ್ರಾ..?  ಬಿಎಸ್ ವೈ ವಿರುದ್ದ ಎಷ್ಟು ಕೆಟ್ಟದಾಗಿ ನಡೆದುಕೊಂಡರು.ಈ ಬಾರಿಯೂ ಜೆಡಿಎಸ್ chaluvarayaswamy

ಬಿಎಸ್ ವೈ ಬೆಂಬಲದಿಂದ 2007ರಲ್ಲಿ ಸಿಎಂ ಆದರು.  ನಂತರ ಬಿಎಸ್ ವೈ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಜೆಡಿಎಸ್ ನವರು ಅನ್ಯಪಕ್ಷದ ಜೊತೆ  ಉತ್ತಮವಾಗಿರುವುದಿಲ್ಲ. ಹೀಗಾಗಿ ಮೈತ್ರಿ ರಾಜ್ಯಟ್ಟದಲ್ಲೇ ಇರುತ್ತೇ ಹೊರತು ಜನರ ಮಟ್ಟಕ್ಕೆ ತಲುಪಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Key words: JDS-BJP, alliance, Chaluvarayaswamy