Thursday, August 13, 2026

BDA Apartments

Home Election 2024 ವಿಶ್ವನಾಥ್ ನೇರ, ನಿಷ್ಠೂರ ರಾಜಕಾರಣಿ: ಪ್ರಾಮಾಣಿಕವಾಗಿದ್ದಾರೆ- ಹಾಡಿಹೊಗಳಿದ ಹೆಚ್.ಡಿಕೆ.

ವಿಶ್ವನಾಥ್ ನೇರ, ನಿಷ್ಠೂರ ರಾಜಕಾರಣಿ: ಪ್ರಾಮಾಣಿಕವಾಗಿದ್ದಾರೆ- ಹಾಡಿಹೊಗಳಿದ ಹೆಚ್.ಡಿಕೆ.

ಮೈಸೂರು,ಏಪ್ರಿಲ್,6,2024 (www.justkannada.in): ಸಮ್ಮಿಶ್ರ ಸರ್ಕಾರ ಪತನ ನಂತರ ಪರಸ್ಪರ ಟೀಕೆ ಟಿಪ್ಪಣಿಗಳಿಂದ ಸಂಘರ್ಷ ಮಾಡಿಕೊಂಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತುಎಂಎಲ್ ಸಿ ಹೆಚ್.ವಿಶ್ವನಾಥ್ ಇದೀಗ ಒಂದಾಗಿದ್ದು ಪರಸ್ಪರ ಹಾಡಿ ಹೊಗಳಿದ್ದಾರೆ.

ಇಂದು ಮೈಸೂರು ಜಿಲ್ಲೆ ಕೆಆರ್ ನಗರದಲ್ಲಿನ ಹೆಚ್.ವಿಶ್ವನಾಥ್ ಮನೆಗೆ ಭೇಟಿ ನೀಡಿದ  ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ನಾಲ್ಕೂವರೆ ವರ್ಷದ ಬಳಿಕ “ವಿಶ್ವಣ್ಣ” ಎಂದರು. ಮೊದಲ ಮುಖಾಮುಖಿಯಲ್ಲೇ ಆತ್ಮೀಯ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ.  ವಿಶ್ವಣ್ಣ ಅದೆಲ್ಲವನ್ನೂ ಮರೆತು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಂತೆ ಕರೆ ಮಾಡಿ ಶುಭ ಕೋರಿದರು‌. ದೂರವಾಣಿ ಮೂಲಕವೇ ನನ್ನ ಬೆಂಬಲ ನಿಮಗಿದೆ ಅಂತ  ತಿಳಿಸಿದರು. ಅವರ ಅಭಿಮಾನಕ್ಕೆ ಸೋತು ಮನೆಗೆ ಬಂದಿದ್ದೇನೆ.  ವಿಶ್ವನಾಥ್ ನೇರ, ನಿಷ್ಠೂರವಾಗಿ ಮಾತನಾಡುವ ರಾಜಕಾರಣಿ. ಆದರೆ ಪ್ರಾಮಾಣಿಕವಾಗಿ ಇದ್ದಾರೆ‌.  ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Key words:  HD Kumaraswamy, mysore, H.Vishwanath