Monday, September 21, 2026

BDA Apartments

ಸಂಸದೆ ಸುಮಲತಾ ಅಂಬರೀಶ್ ಮಹತ್ವದ ಸಭೆ: 5 ವರ್ಷದ ಸಾಧನೆಗಳ ಕೈಪಿಡಿ ಬಿಡುಗಡೆ BDA JK_Ad...
Home Front Page ಸಂಸದೆ ಸುಮಲತಾ ಅಂಬರೀಶ್ ಮಹತ್ವದ ಸಭೆ: 5 ವರ್ಷದ ಸಾಧನೆಗಳ ಕೈಪಿಡಿ ಬಿಡುಗಡೆ.

ಸಂಸದೆ ಸುಮಲತಾ ಅಂಬರೀಶ್ ಮಹತ್ವದ ಸಭೆ: 5 ವರ್ಷದ ಸಾಧನೆಗಳ ಕೈಪಿಡಿ ಬಿಡುಗಡೆ.

ಮಂಡ್ಯ,ಏಪ್ರಿಲ್,3,2024 (www.justkannada.in): ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ನಿರ್ಧಾರವನ್ನ ಇಂದು ಪ್ರಕಟಿಸುವ ಸಲುವಾಗಿ ಬೆಂಬಲಿಗರು ಅಭಿಮಾನಿಗಳ ಜೊತೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಹತ್ವದ ಸಭೆ ನಡೆಸುತ್ತಿದ್ದಾರೆ.

ಮಂಡ್ಯದ ಕಾಳಿಕಾಂಬ ದೇಗುಲಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಾಳಿಕಾಂಬ ದೇಗುಲದ ಬಳಿ ಬಹಿರಂಗ ಸಭೆ ನಡೆಸುತ್ತಿದ್ದು ಪುತ್ರ ಅಭಿಷೇಕ್ ಅಂಬರೀಶ್, ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉಪಸ್ಥಿತರಿದ್ದಾರೆ.ಸಂಸದೆ ಸುಮಲತಾ ಅಂಬರೀಶ್ ಮಹತ್ವದ ಸಭೆ sumalatha

ಇನ್ನು ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಐದು ವರ್ಷಗಳ ಸಾಧನೆಗಳ ಬಗ್ಗೆ ಕೈಪಿಡಿ ಕಿರುಚಿತ್ರ ಬಿಡುಗಡೆ ಮಾಡಲಾಯಿತು. ಇಂದು ಸಭೆಯಲ್ಲಿ ಬೆಂಬಲಿಗರ ಜೊತೆ  ಸುಮಲತಾ ಅಂಬರೀಶ್ ಚರ್ಚಿಸಿ ತಮ್ಮ ನಿಲುವನ್ನ ಪ್ರಕಟಿಸಲಿದ್ದಾರೆ.

Key words: MP, Sumalatha Ambarish, mandya