Wednesday, September 9, 2026

BDA Apartments

Home Front Page ಯಾರು ಕುತಂತ್ರ ಮಾಡಿದ್ದಾರೋ ಅವರನ್ನೇ ಕೇಳಿ: ಅಳಿಯನಿಗೆ ಟಿಕೆಟ್ ಕೈತಪ್ಪಿದಕ್ಕೆ ಸಚಿವ ಮುನಿಯಪ್ಪ ಗರಂ.

ಯಾರು ಕುತಂತ್ರ ಮಾಡಿದ್ದಾರೋ ಅವರನ್ನೇ ಕೇಳಿ: ಅಳಿಯನಿಗೆ ಟಿಕೆಟ್ ಕೈತಪ್ಪಿದಕ್ಕೆ ಸಚಿವ ಮುನಿಯಪ್ಪ ಗರಂ.

ಬೆಂಗಳೂರು,ಮಾರ್ಚ್,30,2024 (www.justkannada.in): ಕೋಲಾರ ಕ್ಷೇತ್ರದಿಂದ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಚ್ ಮುನಿಯಪ್ಪ ಗರಂ ಆದ ಘಟನೆ ನಡೆಯಿತು.

ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕಾರಣ ಯಾರು ಎಂದು ಬೆಂಗಳೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಸಚಿವ ಕೆಎಚ್ ಮುನಿಯಪ್ಪ, ಯಾರು ಕುತಂತ್ರ ಮಾಡಿದ್ದಾರೋ ಅವರನ್ನ ಕೇಳಿ ಎಂದರು.

ಹೈಕಮಾಂಡ್  ತೀರ್ಮಾನಿಸಿದೆ.  ನಾನು ಸಹ ಕೆಲಸ ಮಾಡುತ್ತೇನೆ. ಕೋಲಾರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇನೆ ಎಂದು ಮುನಿಯಪ್ಪ ತಿಳಿಸಿದರು.

Key words: kolar, congress, KH Muniyappa