Thursday, August 6, 2026

BDA Apartments

Home Front Page 28ಕ್ಕೆ 28 ಅಭ್ಯರ್ಥಿಗಳೂ ಗೆಲ್ಲಬೇಕು: ಮುಕ್ತವಾಗಿ ಚರ್ಚೆ ನಡೆಸುತ್ತೇವೆ- ಮಾಜಿ ಸಿಎಂ ಹೆಚ್.ಡಿಕೆ.

28ಕ್ಕೆ 28 ಅಭ್ಯರ್ಥಿಗಳೂ ಗೆಲ್ಲಬೇಕು: ಮುಕ್ತವಾಗಿ ಚರ್ಚೆ ನಡೆಸುತ್ತೇವೆ- ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಮಾರ್ಚ್,29,2024 (www.justkannada.in): ಲೋಕಸಭಾ ಚುನಾವಣೆ ಕಣ ರಂಗೇರಿದ್ದು ಇಂದು ಬಿಜೆಪಿ-ಜೆಡಿಎಸ್ ಮೈತ್ರಿಯ ರಾಜ್ಯಮಟ್ಟದ ಸಮನ್ವಯ ಸಭೆ ನಡೆಯುತ್ತಿದೆ.

ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಸ್ಪರ್ಧಿಸಲು ಮುಂದಾಗಿದ್ದು,  ಹೀಗಾಗಿ ಇಂದು ಉಭಯ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಇಂದು ಖಾಸಗಿ ಹೊಟೇಲ್‌ ನಲ್ಲಿ ಸಭೆ ನಿಗದಿ ಮಾಡಲಾಗಿದ್ದು, ಸಭೆಗೆ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ,  ವಿಪಕ್ಷ ನಾಯಕ ಆರ್ ಅಶೋಕ್, ಬಿ.ಸಿ ಪಾಟೀಲ್, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜಿ.ಟಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸೇರಿ ಎರಡು ಪಕ್ಷದ ಮುಖಂಡರು ಆಗಮಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಅಭ್ಯರ್ಥಿಗಳೂ ಗೆದ್ದು ಬರಬೇಕು. ಹೀಗಾಗಿ ಇಂದು ಮುಕ್ತವಾಗಿ ಎಲ್ಲಾ ವಿಷಯವನ್ನು ಮಾತನಾಡುತ್ತೇವೆ. ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

Key words: BJP, JDS, H.D.kumaraswamy