Sunday, August 23, 2026

BDA Apartments

Home Front Page ಹೆಚ್.ಡಿಡಿ ಅವರೇ ದೇಶಕ್ಕೆ ಮೋದಿ ಅವಶ್ಯಕ ಅಂತಿದ್ದಾರೆ, ಅರ್ಥ ಮಾಡಿಕೊಳ್ಳಿ- ವಿ.ಸೋಮಣ್ಣ.

ಹೆಚ್.ಡಿಡಿ ಅವರೇ ದೇಶಕ್ಕೆ ಮೋದಿ ಅವಶ್ಯಕ ಅಂತಿದ್ದಾರೆ, ಅರ್ಥ ಮಾಡಿಕೊಳ್ಳಿ- ವಿ.ಸೋಮಣ್ಣ.

ಬೆಂಗಳೂರು,ಮಾರ್ಚ್,26,2024(www.justkannada .in):  ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಬಿಜೆಪಿ ವಿರೋಧಿಸುತ್ತಿದ್ದರು. ಈಗ ಅವರೇ ನರೇಂದ್ರ ಮೋದಿ ದೇಶಕ್ಕೆ ಅವಶ್ಯಕ ಎನ್ನುತ್ತಿದ್ದಾರೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು ಎಲ್ಲರ ಆಶಯ.  ಇದು ಮೋದಿ ಎಲೆಕ್ಷನ್ , ದೇಶದ ಎಲೆಕ್ಷನ್, ಇದು ವಿಧಾನಸೌಧದ ಎಲೆಕ್ಷನ್ ಅಲ್ಲ. ಮೋದಿ ದೇಶಕ್ಕೆ ಅವಶ್ಯಕ ಎಂದು ಹೆಚ್.ಡಿ ದೇವೇಗೌಡರೇ ಹೇಳುತ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಧುಸ್ವಾಮಿ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಮಾಧುಸ್ವಾಮಿ ನನ್ನ ಸ್ನೇಹಿತರು. ಎಲ್ಲವೂ ಸರಿ ಹೋಗುತ್ತೆ ಎಂದು ವಿ.ಸೋಮಣ್ಣ ತಿಳಿಸಿದರು.

Key words: HD Devegowda-opposing-BJP-says – Modi – necessary – country – V. Somanna.