ವೆಬ್ ಕಾಸ್ಟಿಂಗ್ ಸಿ.ಸಿ.ಕ್ಯಾಮರ ಪ್ರಭಾವ : ಕೊಠಡಿ ಮೇಲ್ವಿಚಾರಕ ಶಿಕ್ಷಕರನ್ನು ಅಮಾನತು.

sslc ̲ exams ̲ supervisor ̲ suspend ̲ Yadgiri

ಯಾದಗಿರಿ ಜಿಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ವೆಬ್ ಕಾಸ್ಟಿಂಗ್ ಸಿ.ಸಿ.ಕ್ಯಾಮರ ವಿಕ್ಷಣೆ ಮಾಡುತ್ತಿರುವುದು.

 

ಯಾದಗಿರಿ, ಮಾ. ೨೫, ೨೦೨೪ :  ಎಸ್.ಎಸ್.ಎಲ್.ಸಿ. ಪ್ರಥಮ ಬಾಷೆ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಕೊಠಡಿ ಮೇಲ್ವಿಚಾರಕ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ.

ಯಾದಗಿರಿ ಜಿಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ವೆಬ್ ಕಾಸ್ಟಿಂಗ್ ಸಿ.ಸಿ.ಕ್ಯಾಮರ ವಿಕ್ಷಣೆ ಮಾಡಿದಾಗ ಕೊಠಡಿ ಸಂಖ್ಯೆ-11 ರ ಕೋಣೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡು ಬಂದಿದೆ.

ಹುಣಸಗಿ ತಾ||ಸುರಪುರದ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ನಡೆಯುತ್ತಿದ್ದ  ಎಸ್.ಎಸ್.ಎಲ್.ಸಿ. ಪ್ರಥಮ ಬಾಷೆ ಪರೀಕ್ಷಾ ವೇಳೆ ಈ ಘಟನೆ.  ಸದರಿ ಕೊಠಡಿ ಮೇಲ್ವಿಚಾರಕ ಸಾಹೇಬಗೌಡ ಉಕ್ಕಾಲಿ ( ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏವೂರ ತಾ||ಸುರಪುರ )  ಕರ್ತವ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡು ಬಂದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಹಾಗೂ ಮುಖ್ಯ ಅಧಿಕ್ಷಕರ ಗಮನಕ್ಕು ತಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ  ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ , ಸುತ್ತೋಲೆ ಆದೇಶದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕೊಠಡಿಗಳಿಗೆ ಪ್ರವೇಶಿಸುವ ಮುನ್ನ ಕೊಠಡಿಗಳನ್ನು ಪರಿಶೀಲಿಸುವುದು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ಕಂಡುಬಂದಲ್ಲಿ ತಕ್ಷಣವೇ ಮುಖ್ಯ ಅಧೀಕ್ಷಕರ ಗಮನಕ್ಕೆ ತಂದು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಮುಖ್ಯ ಅಧೀಕ್ಷಕರಿಗೆ ಸಹಾಯ ನೀಡುವುದು ಎಂದು ನಿರ್ದೇಶನವಿರುತ್ತದೆ.

ಯಾದಗಿರಿ ಜಿಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ವೆಬ್ ಕಾಸ್ಟಿಂಗ್ ಸಿ.ಸಿ.ಕ್ಯಾಮರ ವಿಕ್ಷಣೆ ಮಾಡುತ್ತಿರುವುದು.

ಆದಾಗ್ಯೂ,  ಸಾಹೇಬಗೌಡ ಉಕ್ಕಾಲಿ ಇವರು ಈ ಆದೇಶವನ್ನು ಉಲ್ಲಂಘಿಸಿ ಪರೀಕ್ಷಾ ಪವಿತ್ರ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದು ಬೇಜವಬ್ದಾರಿತನ ಹಾಗೂ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವದು ಕಂಡುಬಂದಿದೆ. ಆದ್ದರಿಂದ ಅವರನ್ನು ಅಮಾನತುಗೊಳಿಸಿ ಶಿಸ್ತು ಕ್ರಮಕ್ಕೆ ಡಿಡಿಪಿಐ ಆದೇಶಿಸಿದ್ದಾರೆ.

key words: sslc ̲ exams ̲ supervisor ̲ suspend ̲ Yadgiri