ಸಚಿವ ಸಿ.ಪಿ‌.ಯೋಗೇಶ್ವರ್ ಲೆವೆಲ್ ಗೆ ನಾನು ಇಳಿಯಲ್ಲ: ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ-  ಹೆಚ್.ಡಿ ಕುಮಾರಸ್ವಾಮಿ…

ರಾಮನಗರ,ಮಾರ್ಚ್,2,2021(www.justkannada.in):  ವಿದೇಶದಲ್ಲಿ ಹೆಚ್.ಡಿ ಕುಮಾರಸ್ವಾಮಿ ಇಸ್ಪಿಟ್ ಆಡಿದ್ದ ಫೋಟೊಗಳು ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದ ಸಚಿವ ಸಿ.ಪಿ ಯೋಗೇಶ್ವರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.jk

ಈ ಕುರಿತು ರಾಮನಗರದಲ್ಲಿ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ,   ಸಚಿವ ಸಿ.ಪಿ‌.ಯೋಗೇಶ್ವರ್ ಲೆವೆಲ್ ಗೆ ನಾನು ಇಳಿಯಲ್ಲ. ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ. ಚನ್ನಪಟ್ಟಣ ಇಲ್ಲಾಂದ್ರೆ ಎಲ್ಲಾದರೂ ಬರಲಿ. ರಾಜಕಾರಣ ಮಾಡೋದು ನನಗೆ ಗೊತ್ತಿದೆ ಆ ಸವಾಲ್  ಅನ್ನ ನಾನು ಸ್ವೀಕಾರ ಮಾಡಲ್ಲ.  ನನ್ನ ಕಾರ್ಯಕರ್ತರೇ ಸ್ವೀಕಾರ ಮಾಡ್ತಾರೆ ಎಂದು ತಿರುಗೇಟು ನೀಡಿದರು.

ನಾನು ಚನ್ನಪಟ್ಟಣದಲ್ಲಿ ಅರ್ಜಿ ಹಾಕಿ ಬಂದಿದ್ದೆ. ನಾಮಪತ್ರ ಸಲ್ಲಿಸಿ ಬಂದಿದ್ದೆ. ಚನ್ನಪಟ್ಟಣದ ನಾನು ಗೆಲ್ಲಲಿಲ್ಲವಾ..,?  ಹಾಗಾಗಿ ಈ ರೀತಿಯ ಹೇಳಿಕೆಗಳು ಬೇಡ. ಸಿಪಿ ಯೋಗೇಶ್ವರ್ ಬಗ್ಗೆ ಚರ್ಚೆ ಅನವಶ್ಯಕ. ಅವರು ಬಾಯಿ ಚಪಲಕ್ಕೆ ಮಾತನಾಡಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.I am not -down - Minister -CP Yogeshwar- level-former cm-H. D Kumaraswamy.

ಸಚಿವ ಬಿ‌.ಸಿ.ಪಾಟೀಲ್ ಮನೆಗೆ ಕರೆಸಿ ವ್ಯಾಕ್ಸಿನ್ ತೆಗೆದುಕೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಯಾರು ಏನ್ ಬೇಕಾದರೂ ಮಾಡಬಹುದು ಬನ್ನಿ  ಎಂದರು.

Key words: I am not -down – Minister -CP Yogeshwar- level-former cm-H. D Kumaraswamy.