ಸಚಿವ ರಮೇಶ್ ಜಾರಕಿಹೊಳಿ ‘ರಾಸಲೀಲೆ’ ಬಾಂಬ್ : ತನಿಖೆಗೆ ಆಗ್ರಹಿಸಿ ದಿನೇಶ್ ಕಲ್ಲಹಳ್ಳಿ ದೂರು…

ಬೆಂಗಳೂರು,ಮಾರ್ಚ್,2,2021(www.justkannada.in):  ರಾಜ್ಯ ರಾಜಕಾರಣದಲ್ಲಿ ಮತ್ತೊಂದು ರಾಸಲೀಲೆ ಸಿಡಿ ಬಾಂಬ್ ಸ್ಪೋಟಗೊಂಡಿದೆ. ಹೌದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ದೃಶ್ಯ ಬಹಿರಂಗವಾಗಿದ್ದು,  ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ದೂರು ನೀಡಲು ಮುಂದಾಗಿದ್ದಾರೆ.jk

ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ದಿನೇಶ್ ಕಲ್ಲಹಳ್ಳಿ, ಪ್ರಭಾವಿ ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುತ್ತದೆ. ಸಂತ್ರಸ್ತೆಯ ಕುಟುಂಬಸ್ಥರು ನನಗೆ ಅಪ್ರೋಚ್ ಮಾಡಿದ್ದು ಈ ಹಿನ್ನೆಲೆಯಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.Minister -Ramesh jarakiholi rasalile-Dinesh Kallahalli- complaining

ಇನ್ನು ಸಂತ್ರಸ್ತೆ ಮಹಿಳೆ ನನ್ನನ್ನ ಸಂಪರ್ಕಿಸಿ ಆದ ನೋವನ್ನ ನನ್ನ ಬಳಿ ತೋಡಿಕೊಂಡಿದ್ದಾರೆ. ಹೀಗಾಗಿ ಅವರ ಪರ ನಾನು ಕಮಿಷನರ್ ಭೇಟಿ ಮಾಡಿ ದೂರು ನೀಡುತ್ತಿದ್ದೇನೆ. ಇನ್ನು ಸಂತ್ರಸ್ತ ಮಹಿಳೆಯ ಹೆಸರನ್ನ ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Key words: Minister -Ramesh jarakiholi rasalile-Dinesh Kallahalli- complaining