Friday, August 14, 2026

BDA Apartments

Home Front Page ಸಿಎಂ ಬದಲಾವಣೆ ಸುಳಿವು ನೀಡಿದ್ರಾ ಕಾಂಗ್ರೆಸ್ ಶಾಸಕ..?

ಸಿಎಂ ಬದಲಾವಣೆ ಸುಳಿವು ನೀಡಿದ್ರಾ ಕಾಂಗ್ರೆಸ್ ಶಾಸಕ..?

ತುಮಕೂರು,ಮಾರ್ಚ್,23,2024(www,justkannada.in): ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ವಿಪಕ್ಷ ಬಿಜೆಪಿ ನಾಯಕರ ಆರೋಪಿಸುತ್ತಿರುವಾಗಲೇ ಇದೀಗ ತುಮಕೂರು ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್  ಸಿಎಂ ಬದಲಾವಣೆಯ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟ್ ಗೆಲ್ಲದಿದ್ರೆ ಸಿಎಂ ರಾಜೀನಾಮೆ ಕೊಡಬೇಕಾಗುತ್ತೆ.  ನೈತಿಕ ಹೊಣೆ ಹೊತ್ತು  ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ.  ಹೀಗಾಗಿ ಸಿದ್ದರಾಮಯ್ಯರನ್ನ ಉಳಿಸುವಂತಹ ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ಹೇಳ್ತಾ ಇದ್ದೇವೆ  ಎಲ್ಲರೂ ಹಾರೈಸಿ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

Key  words: Congress MLA –Gubbi-Shrinivas- hinted – change of CM