ತಮಿಳುನಾಡು : ಬಿಜೆಪಿ ಅಭ್ಯರ್ಥಿಯಾಗಿ ನಟಿ ರಾಧಿಕಾ ಲೋಕಸಮರಕ್ಕೆ..!

ಬೆಂಗಳೂರು, ಮಾ. 23, 2024 : (www.justkannada.in news ) ಬಹುಭಾಷ ನಟಿ ಹಾಗೂ ನಟ ಶರತ್‌ಕುಮಾರ್ ಅವರ ಪತ್ನಿ ರಾಧಿಕಾ ಶರತ್‌ಕುಮಾರ್ ಲೋಕಸಭಾ ಚುನಾವಣಾ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ.

ಬಿಜೆಪಿ ತಮಿಳುನಾಡು ಉಪಾಧ್ಯಕ್ಷ ಕೆಪಿ ರಾಮಲಿಂಗಂ ಜತೆಗೆ ರಾಧಿಕಾ ಅವರಿಗೂ ಲೋಕಸಭೆ ಚುನಾವಣೆಗೆ ಬಿಜೆಪಿ ಶುಕ್ರವಾರ ಪ್ರಕಟಿಸಿದ 15 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾರೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (CEC) ತಮಿಳುನಾಡು ಮತ್ತು ಪುದುಚೇರಿಯ ಏಕೈಕ ಸ್ಥಾನಕ್ಕೆ 14 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೇಸರಿ ಪಕ್ಷವು ತಮಿಳುನಾಡಿನ ವಿರುದುನಗರ ಲೋಕಸಭಾ ಕ್ಷೇತ್ರದಿಂದ ರಾಧಿಕಾ ಶರತ್‌ಕುಮಾರ್ ಅವರನ್ನು ಕಣಕ್ಕಿಳಿಸಿದ್ದು,‌ ಈ ಕ್ಷೇತ್ರದಿಂದ ಇತ್ತೀಚೆಗೆ ನಿಧನರಾದ ನಟ ವಿಜಯಕಾಂತ್ ಪುತ್ರ ಸಹ ಕಣದಲ್ಲಿದ್ದು ಅದೃಷ್ಠಪರೀಕ್ಷೆಗೆ ಮುಂದಾಗಿದ್ದಾರೆ.

ಡಾ. ಕೆಪಿ ರಾಮಲಿಂಗಂ ತಮಿಳುನಾಡಿನ ನಾಮಕ್ಕಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪಕ್ಷವು ತನ್ನ ನಾಲ್ಕನೇ ಪಟ್ಟಿಯಲ್ಲಿ ಘೋಷಿಸಿರುವ ಇತರ ಅಭ್ಯರ್ಥಿಗಳೆಂದರೆ ಪೊನ್ ವಿ ಬಾಲಗಣಪತಿ (ತಿರುವಳ್ಳೂರು ಎಸ್‌ಸಿ), ಆರ್‌ಸಿ ಪಾಲ್ ಕನಕರಾಜ್ (ಚೆನ್ನೈ ಉತ್ತರ), ಎ ಅಶ್ವಥಾಮನ್ (ತಿರುವಣ್ಣಾಮಲೈ), ಎಪಿ ಮುರುಗಾನಂದಂ (ತಿರುಪ್ಪೂರ್), ಕೆ ವಸಂತರಾಜನ್ (ಪೊಲ್ಲಾಚಿ), ವಿವಿ ಸೆಂಥಿಲ್ನಾಥನ್ (ಕರೂರ್). ), ಪಿ ಕಾರ್ತಿಯಾಯಿನಿ (ಚಿದಂಬರಂ ಎಸ್‌ಸಿ), ಎಸ್‌ಜಿಎಂ ರಮೇಶ್ (ನಾಗಪಟ್ಟಿನಂ ಎಸ್‌ಸಿ), ಎಂ ಮುರುಗಾನಂದಂ (ತಂಜಾವೂರು), ಡಾ. ದೇವನಾಥನ್ ಯಾದವ್ (ಶಿವಗಂಗಾ), ಪ್ರೊ ರಾಮ ಶ್ರೀನಿವಾಸನ್ (ಮದುರೈ) ಮತ್ತು ಬಿ ಜಾನ್ ಪಾಂಡಿಯನ್ (ತೆಂಕಶಿ ಎಸ್‌ಸಿ).

ಪುದುಚೇರಿಯಲ್ಲಿ ರಾಜ್ಯ ಗೃಹ ಸಚಿವ ಎ ನಮಸ್ಶಿವಾಯಂ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ತಮಿಳುನಾಡಿನ ವಿಲವಂಕೋಡ್ ವಿಧಾನಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ವಿಎಸ್ ನಂತಿನಿ ಅವರ ಹೆಸರನ್ನು ಬಿಜೆಪಿ ಘೋಷಿಸಿದೆ.

ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿದ್ದು, ಲೋಕಸಭೆ ಚುನಾವಣೆಗೆ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಬಿಜೆಪಿ ತನ್ನ ನಾಲ್ಕನೇ ಪಟ್ಟಿಯಲ್ಲಿ ಇನ್ನೂ 15 ಅಭ್ಯರ್ಥಿಗಳ ಘೋಷಣೆಯೊಂದಿಗೆ ಲೋಕಸಭೆ ಚುನಾವಣೆಗೆ ಒಟ್ಟು 291 ಅಭ್ಯರ್ಥಿಗಳನ್ನು ಘೋಷಿಸಿದೆ.

Key words :  bjp ̲ release ̲ list ̲ candidates ̲ actor ̲ Radhika ̲ filed ̲ Virudhunagar.