Monday, October 12, 2026

Dasara Wishes

Happy Dasara
Home Front Page  ‘ಕೈ’ ನಾಯಕರು ನನ್ನನ್ನ ಸಂಪರ್ಕಿಸಿದ್ದರು: ನಾಳೆ ನನ್ನ ನಿರ್ಧಾರ ಪ್ರಕಟ- ಮಾಜಿ ಸಿಎಂ ಡಿವಿ ಸದಾನಂದಗೌಡ.

 ‘ಕೈ’ ನಾಯಕರು ನನ್ನನ್ನ ಸಂಪರ್ಕಿಸಿದ್ದರು: ನಾಳೆ ನನ್ನ ನಿರ್ಧಾರ ಪ್ರಕಟ- ಮಾಜಿ ಸಿಎಂ ಡಿವಿ ಸದಾನಂದಗೌಡ.

ಬೆಂಗಳೂರು,ಮಾರ್ಚ್,18,2024(www.justkannada.in): ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಬಂಡಾಯದ ಬಿಸಿ ತಟ್ಟುತ್ತಿದ್ದು ಈಗಾಗಲೇ ಕೆ.ಎಸ್ ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಮಧ್ಯೆ ಇದೀಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿರುವ ಹಿನ್ನೆಲೆ  ಮಾಜಿ ಸಿಎಂ ಡಿ.ವಿ ಸದಾನಂದಗೌಡ ನಾಳೆ ತಮ್ಮ ನಿರ್ಧಾರವನ್ನ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ವಿ ಸದಾನಂದಗೌಡ, ಈಶ್ವರಪ್ಪ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಅವರ ನಿಲುವಿನ ಬಗ್ಗೆ ಏನು ಹೇಳಲ್ಲ.  ನಾಳೆ ನನ್ನ ನಿಲುವು ಪ್ರಕಟಿಸುತ್ತೇನೆ ಎಂದರು.

ನಿನ್ನೆ ಬಿಜೆಪಿ ಪ್ರಮುಖರು ನಮ್ಮ ಮನೆಗೆ ಬಂದಿದ್ದರು, ನನ್ನನ್ನ ಮನವೊಲಿಸಲು ಪ್ರಯತ್ನಿಸಿದರು. ರಾಜಕೀಯ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಬೇಕಿದೆ. ಕಾಂಗ್ರೆಸ್ ನಾಯಕರು ನನ್ನನ್ನ ಸಂಪರ್ಕಿಸಿದ್ದರು.  ನಾಳೇ ಸುದ್ದಿಗೋಷ್ಠೀ ನಡೆಸಿ ನನ್ನ ನಿರ್ಧಾರ ಹೇಳುವೆ ಎಂದು ಡಿ.ವಿ ಸದಾನಂದಗೌಡ ತಿಳಿಸಿದರು.

Key words: My decision- will be –announced- tomorrow- Former CM -DV Sadananda Gowda.