Saturday, August 8, 2026

BDA Apartments

Home Front Page ಟಿಕೆಟ್ ವಿಚಾರದಲ್ಲಿ ಹಲವಾರು ಸರ್ಪ್ರೈಸ್ ಇರುತ್ತೆ: ಕೆಲವು ಕಡೆ ಹೊಸ ಮುಖಗಳು ಬರಲಿವೆ- ಆರ್.ಅಶೋಕ್.

ಟಿಕೆಟ್ ವಿಚಾರದಲ್ಲಿ ಹಲವಾರು ಸರ್ಪ್ರೈಸ್ ಇರುತ್ತೆ: ಕೆಲವು ಕಡೆ ಹೊಸ ಮುಖಗಳು ಬರಲಿವೆ- ಆರ್.ಅಶೋಕ್.

ನವದೆಹಲಿ,ಮಾರ್ಚ್,12,2024(www.justkannada.in):  ಲೋಕಸಭೆ ಚುನಾವಣೆಗೆ ರಾಜ್ಯದ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಕಸರತ್ತು ನಡೆಸುತ್ತಿದ್ದು, ಈಗಾಗಲೇ ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ಆತಂಕ ಶುರುವಾಗಿದೆ. ಇನ್ನು ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಟಿಕೆಟ್ ವಿಚಾರದಲ್ಲಿ ಹಲವಾರು ಸರ್ಪ್ರೈಸ್ ಇರುತ್ತೆ. ಕೆಲವು ಕಡೆ ಹೊಸ ಮುಖಗಳು ಬರಲಿವೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿರುವ ಆರ್.ಅಶೋಕ್, ಟಿಕೆಟ್ ವಿಚಾರದಲ್ಲಿ ಹಲವಾರು ಸರ್ಪ್ರೈಸ್ ಇರುತ್ತೆ.  28 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದ್ದು, ನಿನ್ನೆ ಸಭೆಯಲ್ಲಿ ನರೇಂದ್ರ ಮೋದಿ ಅವರು ಕೂಡ ಭಾಗವಹಿಸಿದ್ದರು. ಚುನಾವಣೆಗೆ  ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನ ಫೈನಲ್ ಮಾಡಲಾಗಿದೆ. ಕೆಲವು ಕಡೆ ಹೊಸ ಮುಖಗಳು ಬರಲಿವೆ. ರಾಜ್ಯದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು.  ರಾಜ್ಯದಲ್ಲಿ ಬದಲಾವಣೆಯಂತೂ ಆಗುತ್ತದೆ. ಹೊಸಬರಿಗೆ ಅವಕಾಶ ಕೊಡುವ ಪ್ರಕ್ರಿಯೆ ಇದೆ ಎಂದರು.

ಯದುವೀರ್ ಸ್ಪರ್ಧೆ ಬಗ್ಗೆ ಗೊತ್ತಿಲ್ಲ.

ಮೈಸೂರು- ಕೊಡಗು ಕ್ಷೇತ್ರದ ಬಗ್ಗೆಯೂ ಚರ್ಚೆಯಾಗಿದೆ.  ನಾನು ಯದುವೀರ್ ಸಂಪರ್ಕ ಮಾಡಿಲ್ಲ. ಯಧುವೀರ್ ಸ್ಪರ್ಧೆ ಬಗ್ಗೆ ಗೊತ್ತಿಲ್ಲ. ನಾಲ್ಕು ಗೋಡೆ ಮಧ್ಯೆ ಚರ್ಚೆಯಾಗಿದೆ. ಅದನ್ನ ಹೇಳಲು ಆಗಲ್ಲ. ಸಂಸದರೆಲ್ಲರು ಟಿಕೆಟ್ ಸಿಗುತ್ತೆ ಎಂದು ಭರವಸೆ ಇಟ್ಟುಕೊಳ್ಳಬೇಕು. ಕಡೆ ಕ್ಷಣದವರೆಗೂ ಏನ್ ಬೇಕಾದರೂ ಆಗಬಹುದು ಎಂದು ಅಶೋಕ್ ತಿಳಿಸಿದರು.

Key words: surprises –lokasabha election- tickets-bjp-  R. Ashok.