Saturday, August 22, 2026

BDA Apartments

Home Front Page ಅವಕಾಶ ಕೊಟ್ಟರೇ ಸ್ಪರ್ಧೆ: ನನ್ನನ್ನು ಗೆಲ್ಲಿಸಿ- ಕ್ಷೇತ್ರದ ಜನರಲ್ಲಿ ಡಾ.ಕೆ.ಸುಧಾಕರ್ ಮನವಿ.  

ಅವಕಾಶ ಕೊಟ್ಟರೇ ಸ್ಪರ್ಧೆ: ನನ್ನನ್ನು ಗೆಲ್ಲಿಸಿ- ಕ್ಷೇತ್ರದ ಜನರಲ್ಲಿ ಡಾ.ಕೆ.ಸುಧಾಕರ್ ಮನವಿ.  

ಚಿಕ್ಕಬಳ್ಳಾಪುರ, ಮಾರ್ಚ್, 11,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಅವಕಾಶ ಕೊಟ್ಟರೇ ಸ್ಪರ್ಧೆ ಮಾಡುತ್ತೇನೆ. ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಕಡಿಮೆ ಮಾಡುವಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಜನರಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಕಾರ್ಯಕರ್ತರ ಜೊತೆ ಸಭೆ  ನಡೆಸಿ ನಂತರ ಮಾತನಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್,  ಎರಡು ಮೂರು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ಆಗುತ್ತದೆ. ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಟಿಕೆಟ್ ನೀಡಿದರೇ ಸ್ಪರ್ಧೆ ಮಾಡುತ್ತೇನೆ. ಈ ಸಾರಿ ನನ್ನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 15 ರಂದು ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ  ಎಂದು ತಿಳಿಸಿದರು.

Key words: Compete-lokasabha-election- Former Minister- Dr. K. Sudhakar