Sunday, August 23, 2026

BDA Apartments

Home Front Page ಟಿಕೆಟ್ ವಿಚಾರ: ಸಂಸದ ಪ್ರತಾಪ್ ಸಿಂಹ ಪರ ಶಾಸಕ ಜಿ.ಟಿ.ದೇವೆಗೌಡ ಬ್ಯಾಟಿಂಗ್.

ಟಿಕೆಟ್ ವಿಚಾರ: ಸಂಸದ ಪ್ರತಾಪ್ ಸಿಂಹ ಪರ ಶಾಸಕ ಜಿ.ಟಿ.ದೇವೆಗೌಡ ಬ್ಯಾಟಿಂಗ್.

ಮೈಸೂರು,ಮಾರ್ಚ್,10,2024(www.justkannada.in):ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಹರಡಿರುವ ಬೆನ್ನಲ್ಲೇ ಇದೀಗ ಪ್ರತಾಪ್ ಸಿಂಹ ಪರ ಶಾಸಕ ಜಿ.ಟಿ.ದೇವೆಗೌಡ ಬ್ಯಾಟಿಂಗ್ ಮಾಡಿದ್ದಾರೆ.

ನೂರಕ್ಕೆ ನೂರರಷ್ಟು ಪ್ರತಾಪ ಸಿಂಹರಿಗೆ ಟಿಕೆಟ್ ಸಿಗುತ್ತೆ. ನಾನು ಕಳೆದ ಎರಡು ಚುನಾವಣೆಯಲ್ಲಿ ಪ್ರತಾಪ್ ಸಿಂಹ ಬೆಂಬಲಿಸಿದ್ದೆ.ಈಗಲೂ ಬೆಂಬಲಿಸುತ್ತೇನೆ ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದ್ದಾರೆ.

೧೦ ವರ್ಷದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ.
ಅವರಿಗೆ ಟಿಕೆಟ್ ಸಿಗುವ ವಿಶ್ವಾಸ ಇದೆ.
ಟಿಕೆಟ್ ತಪ್ಪುತ್ತೆ ಎಂಬ ವಿಚಾರ ನಮಗೆ ಗೊತ್ತಿಲ್ಲ.
ತುಳಿಸಿ ದಾಸಪ್ಪ ನಂತರ ಮೈಸೂರಿನಿಂದ ಒಕ್ಕಲಿಗರು ಸಂಸದರಾಗಿದ್ದಾರೆ.

ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ಜಿ.ಟಿ.ಡಿ ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅಂತ ಯಾವ ಸಂದರ್ಭವು ಬಂದಿಲ್ಲ.
ನಾನು ಯಾವುದೇ ಕಾರಣಕ್ಕು ಕಾಂಗ್ರೆಸ್ ಸೇರಲ್ಲ‌.
ಮೋದಿಯವರನ್ನ ಮತ್ತೆ ಪ್ರಧಾನಿ ಮಾಡುವುದೆ ನಮ್ಮ ಗುರಿ ಎಂದರು.
key words: mysore-MLA-GT Devegowda- MP-Prathap simha