Friday, August 21, 2026

BDA Apartments

Home Front Page ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ: 10 ವರ್ಷ ಕಾಂಗ್ರೆಸ್ ಅಧಿಕಾರಲ್ಲಿರುತ್ತೆ- ಸಚಿವ ರಾಮಲಿಂಗರೆಡ್ಡಿ ವಿಶ್ವಾಸ.

ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ: 10 ವರ್ಷ ಕಾಂಗ್ರೆಸ್ ಅಧಿಕಾರಲ್ಲಿರುತ್ತೆ- ಸಚಿವ ರಾಮಲಿಂಗರೆಡ್ಡಿ ವಿಶ್ವಾಸ.

ದಾವಣಗೆರೆ,ಮಾರ್ಚ್,9,2024(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ 10 ವರ್ಷಗಳ ಕಾಲ  ಅಧಿಕಾರದಲ್ಲಿರುತ್ತದೆ. ಕಾಂಗ್ರೆಸ್ ಸರ್ಕಾರ ಇರುವವರೆಗೆ  ಗ್ಯಾರಂಟಿ ಮುಂದುವರೆಯುತ್ತದೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ದಾವಣಗೆರೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಲೋಕಸಭೆ ಟಿಕೆಟ್  ಆಕಾಂಕ್ಷಿಗಳು ಹೆಚ್ಚಿರುವ ಕಡೆ  ಕಗ್ಗಂಟಾಗಿದೆ.  ಕರ್ನಾಟಕ ರಾಜ್ಯದಲ್ಲಿ  ಯಾವುದೇ  ಭಿನ್ನಮತವಿಲ್ಲ.  ಬಿಜೆಪಿಯಲ್ಲಿ ಜೆಸಿ ಮಾಧುಸ್ವಾಮಿ  ಅಸಮಾಧಾನ ಹೊರಹಾಕಿದ್ದಾರೆ.  ವಿ. ಸೋಮಣ್ಣ ತುಮಕೂರಿಗೆ ಬಂದರು ಎಂದು ವಿರೋಧ ಮಾಡಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರು ಉಳ್ಳವರ ಪರ ನಾವು  ಬಡವರು, ರೈತರ ಪ.  ಇದನ್ನ ಸಹಿಸಲಾಗದೇ ಬಿಜೆಪಿಯವರು ಅಪಪ್ರಚಾರ ಮಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು ಎಂದರು.

Key words: no difference – party- Congress – power – 10 years- Minister -Ramalingareddy