Tuesday, October 27, 2026

Dasara Wishes

Happy Dasara
Home Crime ಕಿರುತೆರೆ ನಟನ ಮೇಲೆ ಹಲ್ಲೆ: ಪ್ರಕರಣ ದಾಖಲು.

ಕಿರುತೆರೆ ನಟನ ಮೇಲೆ ಹಲ್ಲೆ: ಪ್ರಕರಣ ದಾಖಲು.

ಬೆಂಗಳೂರು,ಮಾರ್ಚ್,9,2024(www.justkannada.in): ಕಸದ ವಿಚಾರಕ್ಕೆ ಕಿರುತೆರೆ ನಟನ ಮೇಲೆ ವ್ಯಕ್ತಿಯೊರ್ವ ಹಲ್ಲೆ ನಡೆಸಿರುವ  ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಕಿರುತೆರೆ ನಟ ಚರಿತ್ ಬಾಳಪ್ಪ ಹಲ್ಲೆಗೊಳಗಾದವರು.  ಖಾಲಿ ಜಾಗದಲ್ಲಿ ಕಸವಿಟ್ಟಿದ್ದಕ್ಕೆ ಕಿರುತೆರೆ ನಟ ಚರಿತ್ ಬಾಳಪ್ಪ ಮೇಲೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಫೆ,23 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕಿರುತೆರೆ ನಟನ ಮೇಲೆ ಹಲ್ಲೆ: ಪ್ರಕರಣ ದಾಖಲು assult assult 2

ಶೂಟಿಂಗ್ ಗೆ ಹೋಗುವಾಗ ನಟ ಚರಿತ್ ಬಾಳಪ್ಪ ಖಾಲಿ ಜಾಗದಲ್ಲಿ ಕಸ ಇಟ್ಟಿದ್ದಾರೆ ಎನ್ನಲಾಗಿದ್ದು, ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಚರಿತ್ ಬಾಳಪ್ಪ ಮೇಲೆ ಹಲ್ಲೆಯಾಗಿದೆ ಎನ್ನಲಾಗಿದೆ.  ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Assault –actor-Case –registered-bangalore