Tuesday, August 25, 2026

BDA Apartments

Home Front Page ಬಾಂಬ್ ಸ್ಪೋಟ ಪ್ರಕರಣ: ಸೂಕ್ತ ರೀತಿಯಲ್ಲಿ ತನಿಖೆಯಾಗಲಿ- ಆರ್ .ಅಶೋಕ್.

ಬಾಂಬ್ ಸ್ಪೋಟ ಪ್ರಕರಣ: ಸೂಕ್ತ ರೀತಿಯಲ್ಲಿ ತನಿಖೆಯಾಗಲಿ- ಆರ್ .ಅಶೋಕ್.

ಬೆಂಗಳೂರು, ಮಾರ್ಚ್ 2,2024(www.justkannada.in): ರಾಮೇಶ್ವರ ಕೆಫೆಯಲ್ಲಿ  ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಆರ್.ಅಶೋಕ್ ಅವರು, ವಿಧಾನಸೌಧಧಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಮುಚ್ಚಿ ಹಾಕುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಆ ರೀತಿ ಕೂಗಲೇ ಇಲ್ಲ ಎನ್ನುತ್ತಿದ್ದಾರೆ. ಅದಕ್ಕಾಗಿ ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲದಂತಾಗಿದೆ ಎಂದು  ಕಿಡಿಕಾರಿದರು.

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ ರಾಷ್ಟ್ರದ ಭದ್ರತೆಯ ಪ್ರಶ್ನೆ. ಓಲೈಕೆ ರಾಜಕಾರಣ ಮಾಡುವುದು ಬಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದೂಗಳು ಒಂದು ಸಣ್ಣ ತಪ್ಪು ಮಾಡಿದರೂ ಅವರನ್ನು ಒಳಗೆ ಹಾಕಬೇಕು ಅನ್ನೋ ಮನಸ್ಥಿತಿ ಈ ಕಾಂಗ್ರೆಸ್ ಸರ್ಕಾರಕ್ಕಿದೆ. ಅದಕ್ಕಾಗಿ ಕಾಂಗ್ರೆಸ್​ ನವರು ಈ ರೀತಿಯ ಮನೋಸ್ಥಿತಿಯಿಂದ ಮೊದಲು ಹೊರಗೆ ಬರಲಿಲ್ಲ ಅಂದರೆ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತವೆ ಎಂದು ಆರ್.ಅಶೋಕ್ ಹೇಳಿದರು.

Key words: Bomb blast –case-investigated -properly- R.Ashok.