Friday, October 23, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Front Page ಪೊಲೀಸ್ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ.

ಪೊಲೀಸ್ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ.

ಮೈಸೂರು,ಮಾರ್ಚ್,2,2024(www.justkannada.in): ನಗರದ ಜಲಪುರಿಯಲ್ಲಿ ನಿರ್ಮಾಣವಾಗಿರುವ ಪೊಲೀಸ್ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಧ್ಘಾಟಿಸಿದರು.

ಪೊಲೀಸ್ ಆರೋಗ್ಯ ಕೇಂದ್ರ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು,  6 ಹಾಸಿಗೆಗಳಿರಲಿವೆ ಈ ಕೇಂದ್ರ ಈ ಹಿಂದೆ ಹಳೇ ಪೊಲೀಸ್ ವಸತಿಗೃಹದಲ್ಲಿ ಕಾರ್ಯನಿರ್ವಹಿಸುತಿತ್ತು.

ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಸೇವೆ ನೀಡುವ ಕೇಂದ್ರದಲ್ಲಿ ಬೆಳಗಿನಿಂದ ಸಂಜೆವರೆಗೆ ಸೇವೆ ಲಭ್ಯವಿರಲಿದ್ದು, ಇಬ್ಬರು ಮೆಡಿಕಲ್ ಆಫೀಸರ್, ಫಾರ್ಮಾಸಿಸ್ಟ್, ಮೈನರ್ ಆಪರೇಷನ್ ಥಿಯೇಟರ್, ಕಿರಿಯ ಆರೋಗ್ಯ ಸಹಾಯಕರು ಇರಲಿದ್ದು, ಲ್ಯಾಬೊರೇಟರಿ, ಪಿಸಿಯೋಥೆರಪಿ ಸೇವೆ ದೊರೆಯಲಿದೆ.ಪೊಲೀಸ್ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ police

ಪೊಲೀಸ್ ಸಿಬ್ಬಂದಿಗಳಿಗೆ ವಾರ್ಷಿಕ ತಪಾಸಣೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುತಿತ್ತು, ಇನ್ನು ಮುಂದೆ ಪೊಲೀಸ್ ಆರೋಗ್ಯ ಕೇಂದ್ರದಲ್ಲಿ ವಾರ್ಷಿಕ ಆರೋಗ್ಯ ತಪಾಸಣೆ ಮಾಡಲಾಗುವುದು.

ಪೊಲೀಸ್ ಸಿಬ್ಬಂದಿಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದರಿಂದ ಅವರಿಗೆ ಡಯಟ್ ಕೌನ್ಸಿಲಿಂಗ್ ಸೇರಿದಂತೆ ವಿವಿಧ ಕೌನ್ಸಿಲಿಂಗ್ ಸೇವೆಗಳನ್ನು ಇಲಾಖೆಯಲ್ಲಿರುವ ಸೈಕಾಲಜಿಸ್ಟ್ ಅವರಿಂದ ಕೊಡಿಸಲಾಗುವುದೆಂದು ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಡಾ.ವೆಂಕಟೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹಾದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಮಂಜೇಗೌಡ, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಇದ್ದರು.

Key words: CM Siddaramaiah- inaugurated- Police Health Centre-mysore