Tuesday, September 1, 2026

BDA Apartments

Home Front Page ಶಾಸಕ ಯತ್ನಾಳ್ ಗೆ ಮುಖಭಂಗ: ಕಾಂಗ್ರೆಸ್ ತೆಕ್ಕೆಗೆ ವಿಜಯಪುರ ಮಹಾನಗರ ಪಾಲಿಕೆ.

ಶಾಸಕ ಯತ್ನಾಳ್ ಗೆ ಮುಖಭಂಗ: ಕಾಂಗ್ರೆಸ್ ತೆಕ್ಕೆಗೆ ವಿಜಯಪುರ ಮಹಾನಗರ ಪಾಲಿಕೆ.

ವಿಜಯಪುರ, ಜನವರಿ ,9,2024(www.justkannada.in):   ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್​ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದ್ದು ಈ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಗೆ ಮುಖಭಂಗವಾಗಿದೆ.

ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನದಲ್ಲಿ ಕಾಂಗ್ರೆಸ್ ​ ಜಯ ಸಾಧಿಸಿದೆ. ವಿಜಯಪುರ ಪಾಲಿಕೆ ಮೇಯರ್​ ಆಗಿ ಕಾಂಗ್ರೆಸ್ ​ನ ಮೆಹಜಬೀನ್ ಹೊರ್ತಿ  , ಉಪ ಮೇಯರ್​ ಆಗಿ ಕಾಂಗ್ರೆಸ್​​ನ ದಿನೇಶ್ ಹಳ್ಳಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿಜಯಪುರ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಿಜಯಪುರ ಪಾಲಿಕೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೆಜಬೀನ್ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಎಸ್ ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Key words: Vijayapur -city-Corporation –won- Congress.