Sunday, August 23, 2026

BDA Apartments

Home Front Page ದೇಶಕ್ಕಾಗಿ ಎಲ್ಲಾ ರೀತಿಯಲ್ಲಿ ತ್ಯಾಗ ಮಾಡಿದ್ದು ಕಾಂಗ್ರೆಸ್: ನಾವ್ಯಾಕೆ ಹೊಟ್ಟೆ ಕಿಚ್ಚು ಪಡಬೇಕು? ಸಚಿವ ಈಶ್ವರ್...

ದೇಶಕ್ಕಾಗಿ ಎಲ್ಲಾ ರೀತಿಯಲ್ಲಿ ತ್ಯಾಗ ಮಾಡಿದ್ದು ಕಾಂಗ್ರೆಸ್: ನಾವ್ಯಾಕೆ ಹೊಟ್ಟೆ ಕಿಚ್ಚು ಪಡಬೇಕು? ಸಚಿವ ಈಶ್ವರ್ ಖಂಡ್ರೆ.

ಕಲಬುರಗಿ, ಜನವರಿ,4,2024(www.justkannada.in):  ರಾಮಮಂದಿರ ಉದ್ಘಾಟನೆಯಾಗುತ್ತಿರುವುದಕ್ಕೆ ಕಾಂಗ್ರೆಸ್ ನವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದಿದ್ದ ಬಿಜೆಪಿ ನಾಯಕರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ದೇಶಕ್ಕಾಗಿ ಏನೇನು ಮಾಡಿಲ್ಲ‌. ದೇಶಕ್ಕಾಗಿ ಎಲ್ಲಾ ರೀತಿಯಲ್ಲಿ ತ್ಯಾಗ ಮಾಡಿದ್ದು ಕಾಂಗ್ರೆಸ್. ನಾವ್ಯಾಕೆ ಹೊಟ್ಟೆ ಕಿಚ್ಚು ಪಡಬೇಕು? ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ದ ಕಿಡಿಕಾರಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ‌. ಭಾವನಾತ್ಮಕವಾಗಿ ಜನರ ಕೆರಳಿಸಿ ಲಾಭ ಮಾಡಿಕೊಳ್ಳುವುದು ಬಿಜೆಪಿಯ ಗುಣ. ಜನ ಬಹಳಷ್ಟು ಜಾಗೃತರಾಗಿದ್ದಾರೆ, ಈ ರೀತಿಯ ವಿಷ ಬೀಜ ಬಿತ್ತುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

ರಾಮ, ಕೃಷ್ಣ, ಸೀತಾ ಎಲ್ಲಾ ಜನರ ಭಕ್ತಿ ಮತ್ತು ನಂಬಿಕೆಗೆ ಬಿಟ್ಟಿದ್ದು. ನಾವು ದೇವರ ಭಕ್ತರೇ ಇದ್ದೇವೆ. ರಾಷ್ಟ್ರವಿರೋಧಿ ಸಂಘಟನೆಗಳಿಗೆ ಯಾವತ್ತಿಗೂ ಬೆಂಬಲ ಕೊಡುವವರು ಬಿಜೆಪಿಯವರು. ನಮಗೆ ನಷ್ಟ ಆದ್ರೂ ಪರವಾಗಿಲ್ಲ, ನಾವು ರಾಷ್ಟ್ರ ವಿರೋಧಿಗಳಿಗೆ ಬೆಂಬಲ ಕೊಡಲಾರೆವು ಎಂದು ಹೇಳಿದರು.

Key words: BJP-Protest-Minister- Ishwar Khandre.