ಮೈಸೂರು ವಿವಿ ಸಿಂಡಿಕೇಟ್ ಪ್ರಾಧಿಕಾರಕ್ಕೆ ಸದಸ್ಯರ ನಾಮನಿರ್ದೇಶನ: ಸರ್ಕಾರದಿಂದ ಆದೇಶ.

ಬೆಂಗಳೂರು,ಜನವರಿ,4,2024(www.justkannada.in):  ಮೈಸೂರು ವಿಶ್ವವಿದ್ಯಾನಿಲಯ  ಸಿಂಡಿಕೇಟ್ ಪ್ರಾಧಿಕಾರಕ್ಕೆ  6 ಮಂದಿಯನ್ನ ಸದಸ್ಯರಾಗಿ ನಾಮನಿರ್ದೇಶನ ಮಾಡಿ ರಾಜ್ಯ  ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ  ಉನ್ನತ ಶಿಕ್ಷಣ ಇಲಾಖೆ, ಸರ್ಕಾರದ ಅಧೀನ ಕಾರ್ಯದರ್ಶಿ  ಶೀತಲ್ ಎಂ.ಹಿರೇಮಠ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಅನ್ವಯಿಕೆ ಹೊಂದಿರುವ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಅದೇ ಅಧಿನಿಯಮದ ಪ್ರಕರಣ 28(1) (ಜಿ) ರನ್ವಯ ಹಾಗೂ ಪ್ರಕರಣ 38 ಮತ್ತು 39 ರ ಉಪಬಂಧಕ್ಕೊಳಪಟ್ಟು, ಈ ಕೂಡಲೇ ಜಾರಿಗೆ ಬರುವಂತೆ ಸರ್ಕಾರದಿಂದ ನಾಮನಿರ್ದೇಶನಗಳನ್ನು ಮಾಡಲಾಗಿದೆ ಎಂದಿದ್ದಾರೆ.

ಮೈಸೂರು ವಿವಿ ಸಿಂಡಿಕೇಟ್ ಪ್ರಾಧಿಕಾರಕ್ಕೆ ನಾಮನಿರ್ದೇಶನಗೊಂಡವರ ವಿವರ ಈ ಕೆಳಕಂಡಂತಿದೆ.

ಮೈಸೂರಿನ ವಿಜಯನಗರ 3ನೇ ಹಂತದ ನಿವಾಸಿ  ಮಹದೇಶು(B,com),

ಮೈಸೂರು ಹಂಪಾಪುರ ಹೋಬಳಿ ಕ್ಯಾತನಹಳ್ಳಿಯ ನಾಗರಾಜು ಸಿ.(MA, B.Ed )

ಇಲವಾಲ ಹೋಬಳಿಯ ಜೆಟ್ಟಿಹುಂಡಿ ಗ್ರಾಮದ ಡಾ.ಬಸವರಾಜು.ಸಿ.( MA, B.Ed )

ಮೈಸೂರಿನ  ಬನ್ನಿಮಂಟಪ ಸಿ. ಬಡವಾಣೆ ನಿವಾಸಿ ಪ್ರೊ. ಶಬ್ಬೀರ್ ಮೊಹಮ್ಮದ್ ಮುಸ್ತಫಾ(M.A)

ಮೈಸೂರಿನ ಮಧುವನ ಲೇಔಟ್ ಶ್ರೀರಾಂಪುರ 2nd ಸ್ಟೇಜ್ ನಿವಾಸಿ ಡಾ.ಶಿಲ್ಪಾ ಜೆ.(MBBS, MD)

ನಂಜನಗೂಡು ತಾಲ್ಲೂಕು ಹಾರೋಪುರ ಗ್ರಾಮದ ನಟರಾಜು ಹೆಚ್.ಎಚ್ (MA)

ಈ ಮೇಲ್ಕಂಡವರನ್ನ ಮೈಸೂರು ವಿವಿ ಸಿಂಡಿಕೇಟ್ ಪ್ರಾಧಿಕಾರಕ್ಕೆ  ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.

Key words: Nomination – Members – Mysore university -Syndicate Authority