Friday, August 14, 2026

BDA Apartments

Home Cinema ಜ.12ಕ್ಕೆ ನಟ ಶಿವರಾಜ್ ಕುಮಾರ್ 2ನೇ ತಮಿಳು ಚಿತ್ರ ಬಿಡುಗಡೆ.

ಜ.12ಕ್ಕೆ ನಟ ಶಿವರಾಜ್ ಕುಮಾರ್ 2ನೇ ತಮಿಳು ಚಿತ್ರ ಬಿಡುಗಡೆ.

ಬೆಂಗಳೂರು,ಜನವರಿ,3,2024(www.justkannada.in):  ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ  ಶಿವರಾಜ್‌ ಕುಮಾರ್ ಅವರು ನಟಸಿರುವ  2ನೇ ತಮಿಳು ಸಿನಿಮಾ ಜನವರಿ 12ರಂದು ಬಿಡುಗಡೆಯಾಗಲಿದೆ.

ಧನುಷ್-ಶಿವರಾಜ್‌ ಕುಮಾರ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’  ಚಿತ್ರ ಜನವರಿ 12ರಂದು  ರಿಲೀಸ್ ಆಗಲಿದೆ. ಇದು ಧನುಷ್ ಅವರ 49ನೇ ಚಿತ್ರವಾಗಿದೆ.

ಚಿತ್ರವನ್ನು ಅರುಣ್ .ಮಾಥೇಶ್ವರನ್ ನಿರ್ದೇಶಿಸಿದ್ದು,  ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ  ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಚಿತ್ರದ ಕಥಾಹಂದರದ ಸಣ್ಣ ಝಲಕ್ ನೀಡಿದೆ. ಜಿ.ವಿ. ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರ ನೀಡಿದೆ.

ಸೂಪರ್‌ ಸ್ಟಾರ್ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಈ ಚಿತ್ರದಲ್ಲಿ ನಟಿಸುವ ಮೂಲಕ ನಟ ಶಿವರಾಜ್‌ ಕುಮಾರ್‌ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿನ ‘ನರಸಿಂಹ’ ಎಂಬ  ಪಾತ್ರವನ್ನು ಅವರು ನಿರ್ವಹಿಸಿದ್ದರು. ಇದಾದ ಬಳಿಕ ಇದೀಗ ‘ಕ್ಯಾಪ್ಟನ್ ಮಿಲ್ಲರ್’ ಮೂಲಕ ಮತ್ತೊಂದು ಭಿನ್ನ ಪಾತ್ರದಲ್ಲಿ ಶಿವರಾಜ್‌ ಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

Key words:  January 12- actor -Shivaraj Kumar- 2nd –Tamil- film – release