Thursday, August 20, 2026

BDA Apartments

Home Crime ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆ: ಫೋಟೊ ವೈರಲ್ ಬೆನ್ನಲ್ಲೆ ಇಬ್ಬರು ಆತ್ಮಹತ್ಯೆ.

ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆ: ಫೋಟೊ ವೈರಲ್ ಬೆನ್ನಲ್ಲೆ ಇಬ್ಬರು ಆತ್ಮಹತ್ಯೆ.

ಮೈಸೂರು,ಡಿಸೆಂಬರ್,20,2023(www.justkannada.in): ವಿವಾಹಿತ ಮಹಿಳೆಯೊಂದಿಗೆ ಯುವಕ ಸಲುಗೆ ಬೆಳೆಸಿಕೊಂಡಿದ್ದು ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಶೃತಿ (28), ಮುರುಳಿ‌(20) ಆತ್ಮಹತ್ಯೆಗೆ ಶರಣಾದವರು. ಇಬ್ಬರು ಹುಣಸೂರು ಕಲ್ಕುಣಿಗೆ ನಿವಾಸಿಗಳಾಗಿದ್ದು ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರು ಒಟ್ಟಿಗೆ ಇದ್ದ ಪೋಟೋವನ್ನು ಮುರುಳಿ ಸ್ಟೇಟಸ್‌ ನಲ್ಲಿ ಅಪ್‌ಲೋಡ್ ಮಾಡಿದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ಗೃಹಿಣಿ‌ ಯುವಕನ ಪೋಟೋ ವೈರಲ್ ವೈರಲ್ ಆಗಿತ್ತು.

ಇದರಿಂದ ಎರಡು ಕುಟುಂಬದ  ನಡುವೆ ಘರ್ಷರ್ಣೆ ಉಂಟಾಗಿದ್ದು, ಇದರಿಂದ ಹೆದರಿದ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಚಾರ ತಿಳಿದ ಮುರುಳಿ ಸಹ ನೇಣಿಗೆ ಶರಣಾಗಿದ್ದಾನೆ.

ಮುರುಳಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.  ಈ ಸಂಬಂಧ ಶೃತಿ ಹಾಗೂ ಮುರುಳಿ‌ ಕುಟುಂಬದವರು ಪರಸ್ಪರ ದೂರು ನೀಡಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Young man- affair -with -married woman-Two –commit- suicide