Monday, October 12, 2026

Dasara Wishes

Happy Dasara
Home Front Page ‘ಜಸ್ಟ್ ಕನ್ನಡ’ದ ನೂತನ ಕಚೇರಿ ಉದ್ಘಾಟನೆ.

‘ಜಸ್ಟ್ ಕನ್ನಡ’ದ ನೂತನ ಕಚೇರಿ ಉದ್ಘಾಟನೆ.

ಮೈಸೂರು, ಡಿಸೆಂಬರ್ 14, 2023(www.justkannada.in): ಕನ್ನಡ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಹದಿಮೂರು ವಸಂತಗಳನ್ನು ಪೂರೈಸಿರುವ ಜಸ್ಟ್ ಕನ್ನಡ ಸುದ್ದಿ ತಾಣದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಇಂದು ನೆರವೇರಿತು.
ಮೈಸೂರಿನ ಕುವೆಂಪುನಗರದ ಪಿ ಆಂಡ್ ಟಿ ಬ್ಲಾಕ್’ನ ಮಹರ್ಷಿ ದಯಾನಂದ ಸರಸ್ವತಿ ರಸ್ತೆಯಲ್ಲಿರುವ ಜಸ್ಟ್ ಕನ್ನಡ ನೂತನ ಕಚೇರಿಯನ್ನ ಮಾಜಿ ಶಾಸಕರು, ಕೆಡಿಪಿ ಸದಸ್ಯರೂ ಆದ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು ವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಸಪ್ನ ಅವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ , ಹೆಚ್.ಎ ವೆಂಕಟೇಶ್ ಉಪಸ್ಥಿತರಿದ್ದರು.

key words: justkannada-office-innuagration