Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್ ಸಂಪರ್ಕವಿರುವ ಮೌಲ್ವಿ ಇದ್ದ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ...

ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್ ಸಂಪರ್ಕವಿರುವ ಮೌಲ್ವಿ ಇದ್ದ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ.

ಬೆಳಗಾವಿ,ಡಿಸೆಂಬರ್,6,2023(www.justkannada.in):  ಹುಬ್ಬಳ್ಳಿಯ ಮುಸ್ಲೀಂ ಸಮಾವೇಶದ ವೇಳೆ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್(ISIS) ಸಂಪರ್ಕವಿರುವ ಮೌಲ್ವಿ ಇದ್ದ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್(ISIS) ಸಂಪರ್ಕವಿರುವ ಮೌಲ್ವಿ ಇದ್ದ. ಇಂಥವರ ಸಭೆಗೆ ಸಿಎಂ ಹೋಗಿದ್ದಾರೆ.  ಹುಡುಗಾಟಿಕೆಗೆ ಹೇಳುತ್ತಿಲ್ಲ. ಗಂಭೀರವಾಗಿ ಹೇಳುತ್ತಿದ್ದೇನೆ ಎಂದರು.ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಐಸಿಸ್ ಸಂಪರ್ಕವಿರುವ ಮೌಲ್ವಿ ಇದ್ದ- ಶಾಸಕ ಬಸ...

ವಿಜಯಪುರದಲ್ಲಿ ಗೋಹತ್ಯೆ ನಿಷೇಧ ಮಾಡಬೇಕು ಎಂದಾಗ ನಮ್ಮನ್ನು ಹತ್ಯೆ ಮಾಡುವುದಾಗಿ ಹೇಳಿದ್ದವನು ವೇದಿಕೆಯಲ್ಲಿ ಇದ್ದಾನೆ.  ವಾರ ತಡೆಯಿರಿ ಅವನ ಐಸಿಸ್ ಬಗ್ಗೆ  ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದರು.

Key words: MLA- Basanagowda Patil Yatnal-cleric – links – ISIS- Beside -CM Siddaramaiah.