Friday, August 14, 2026

BDA Apartments

Home Front Page ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ..

ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ..

ರಾಮನಗರ ,ಡಿಸೆಂಬರ್ 02,2023(www.justkannada.in): ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಎಂಬುವವರು ನಾಪತ್ತೆಯಾಗಿದ್ದು ಕಿಡ್ನ್ಯಾಪ್  ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಲ್ಲಿ ತಂಗಿದ್ದ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದಾರೆ.  ಮಹದೇವಯ್ಯ ಅವರನ್ನು ಯಾರೋ ಅಪಹರಣ  ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತೋಟದ ಮನೆಗೆ ಚನ್ನಪಟ್ಟಣ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು,  ಮಹದೇವಯ್ಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.

ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕರಾಗಿರುವ ಮಹದೇವಯ್ಯ ಅವರು ಆಗಾಗ ತೋಟದ‌ ಮನೆಗೆ ಬಂದು ತಂಗುತ್ತಿದ್ದರು. ಆದರೆ ಇಂದು ನಾಪತ್ತೆಯಾಗಿದ್ದಾರೆ.

Key words: Former minister -CP Yogeshwar – brother-in-law – missing..