Friday, October 9, 2026

BDA Apartments

Just Kannada BDA JK_Adv BDA Adv
Home Front Page ಮೈಸೂರು ದಸರಾಗೆ ಎರಡು ಹಂತದಲ್ಲಿ ಬಂದೋಬಸ್ತ್: ಸಿಸಿ ಟಿವಿ ಕಣ್ಗಾವಲು- ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್

ಮೈಸೂರು ದಸರಾಗೆ ಎರಡು ಹಂತದಲ್ಲಿ ಬಂದೋಬಸ್ತ್: ಸಿಸಿ ಟಿವಿ ಕಣ್ಗಾವಲು- ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್

ಮೈಸೂರು, ಅಕ್ಟೋಬರ್,9,2026 (www.justkannada.in):  ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಅಕ್ಟೋಬರ್ 11 ರಿಂದ 21 ರವೆಗೆ ನಡೆಯುತ್ತಿದ್ದು ಎರಡು ಹಂತದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.

ಮೈಸೂರು ದಸರಾ ಮಹೋತ್ಸವ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಈ ಬಾರಿ ದಸರಾಗೆ    5161 ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸ್, 33 ಕೆ ಎಸ್ ಅರ್ ಪಿ ತುಕಡಿ, 25 ಸಿಎಅರ್ ತುಕಡಿ, 24 ಎಸಿಎಸ್ ಟೀಮ್,1500 ಹೋಮ್ ಗಾರ್ಡ್ ಸೇರಿದಂತೆ ಒಟ್ಟು 6719 ಪೊಲೀಸರನ್ನು ನಿಯೋಜನೆ ಮಾಡಲಿದ್ದೇವೆ. ಈ ಬಾರಿ ದಸರಾಗೆ 18 ಪೊಲೀಸ್ ಸಹಾಯ ಕೇಂದ್ರ ತೆರಯಲಾಗಿದೆ ಎಂದು ತಿಳಿಸಿದರು.Two-tier security chamundi chamundi 1

ಜಂಬೂ ಸವಾರಿಯ ದಿನ ಶಿಥಲ ಕಟ್ಟಡಗಳು ಹಾಗೂ ಮರದ ಮೇಲೆ ಕುಳಿತು ಜಂಬೂಸವಾರಿ ವೀಕ್ಷಣೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಹಳೆಯ ದಸರಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮೈಸೂರು ನಗರದ ಅನೇಕ ಕಡೆ ಸಂಚಾರ ಬದಲಾವಣೆ ಮಾಡಲಾಗಿದೆ. ದಸರಾಗೆ ಬರುವ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಬಾರಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ಬಾರಿ ದಸರಾದಲ್ಲಿ ಪ್ರಮುಖ ಸ್ಥಳದಲ್ಲಿ 35,794 ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. 28 ಆ್ಯಂಬುಲೆನ್ಸ್ , 33 ಅಗ್ನಿಶಾಮಕ ವಾಹನವನ್ನು ದಸರಾಗೆ ನಿಯೋಜನೆ ಮಾಡಲಾಗುತ್ತಿದೆ ಎಂದರು.Two-tier security mysore dasara

ಈ ಬಾರಿ ಹೀಲಿಯಂ ಬಲೂನ್ ಗಳ ಮಾರಾಟ ನಿಷೇಧ

ದಸರಾ ಸಮಯದಲ್ಲಿ ಈ ಬಾರಿ ಹೀಲಿಯಂ ಬಲೂನ್ ಗಳ ಮಾರಾಟವನ್ನು ನಿಷೇಧ ಮಾಡಿದ್ದೇವೆ. 48 ಸಾವಿರ ಆಸನಕ್ಕೆ ಮಾತ್ರ ಈ ಬಾರಿ ವ್ಯವಸ್ಥೆ ಮಾಡುತ್ತೇವೆ. ಗೊಲ್ಡ್ ಪಾಸ್ ಜೊತೆಗೆ ಅವರ ಸೀಟ್ ನಂಬರ್ ನ್ನು ನಿಗದಿ ಮಾಡುತ್ತೇವೆ ಎಂದು  ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.Mysuru Dasara jk02_new jk02 new

 

English Summary
Title

Mysuru Dasara 2026: Seema Latkar Deploys Two-Tier Security Grid

Short Description
Mysuru Police Commissioner Seema Latkar has implemented a robust two-tier security arrangement for the Mysuru Dasara 2026 festival. To ensure public safety during the grand Nada Habba festivities, over 6,300 police personnel—including KSRP, DAR, and RAF squads—have been deployed across the city. Phase one of the security blueprint secures early cultural venues, while phase two heavily reinforces the iconic Jamboo Savari procession and the Torchlight Parade. Supported by a massive grid of 30,000 CCTV cameras and drone surveillance, this comprehensive strategy guarantees strict crowd control and VVIP protection.
Keywords
Two-tier security, Mysuru Dasara, Police Commissioner, Seema Latkar