ಗೃಹಲಕ್ಷ್ಮೀ ಹೆಸರಲ್ಲಿ ಮೋಸ: ಕಾಳಸಂತೆಯಲ್ಲಿ ಅಕ್ಕಿ ಮಾರಾಟದಲ್ಲಿ ಸರ್ಕಾರವೇ ಭಾಗಿ- ಬೊಮ್ಮಾಯಿ ಆರೋಪ.

ಬೆಂಗಳೂರು,ಡಿಸೆಂಬರ್,2,2023(www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹಲಕ್ಷ್ಮಿ ಹೆಸರಲ್ಲಿ ಗೃಹಿಣಿಯರಿಗೆ ಮೋಸ  ಮಾಡುತ್ತಿದ್ದಾರೆ. ಮೊದಲ ತಿಂಗಳ ಹಣ ಮಾತ್ರ ಮಹಿಳೆಯರಿಗೆ ಹಾಕಿದ್ದಾರೆ. ಈ ಮೂಲಕ ಗೃಹಲಕ್ಷ್ಮೀ ಯೋಜನೆ ವಿಫಲವಾಗಿದೆ. ಇನ್ನು ಅನ್ನಭಾಗ್ಯ ಯೋಜನೆಯಡಿ 10ಕೆ. ಜಿ ಅಕ್ಕಿ ಕೊಡ್ತೇನೆ ಎಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿ ಕೊಡುತ್ತಿದೆ.  ಕಾಳ ಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿದೆ.  ಸರ್ಕಾರವೇ ಅಕ್ಕಿ ಮಾರಾಟದಲ್ಲಿ  ಭಾಗಿಯಾಗಿದೆ ಎಂದು ಆರೋಪಿಸಿದರು.

ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಣ್ಣಮನೆ ಕಟ್ಟೋರಿಗೆ ರೇಟ್ ಫಿಕ್ಸ್ ಮಾಡಿದ್ದೀರಿ.  ಒಳಚರಂಡಿ ಕನೆಕ್ಷನ್ ಗೂ ರೇಟ್ ಫಿಕ್ಸ್ ಮಾಡಿದ್ದೀರಿ. ಎಲ್ಲದರ  ಬಗ್ಗೆಯೂ ಪಾರದರ್ಶಕ ತನಿಖೆಯಾಗಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Fraud – name – Grihalakshmi- former CM-Basavaraj Bommai- alleges.