Monday, October 26, 2026

Dasara Wishes

Happy Dasara
Home Front Page ಹಾಸನಾಂಬೆ ದರ್ಶನ ಸಂಪನ್ನ: ಗರ್ಭಗುಡಿಯ ಬಾಗಿಲು ಬಂದ್.

ಹಾಸನಾಂಬೆ ದರ್ಶನ ಸಂಪನ್ನ: ಗರ್ಭಗುಡಿಯ ಬಾಗಿಲು ಬಂದ್.

ಹಾಸನ, ನವೆಂಬರ್,15,2023(www.justkannada.in): ಪ್ರಸಕ್ತ ವರ್ಷ 14 ದಿನಗಳ ಹಾಸನಾಂಬೆ ದರ್ಶನಕ್ಕೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ. ಸಾವಿರಾರು ಭಕ್ತಾದಿಗಳು ಶಕ್ತಿದೇವತೆ ಹಾಸನಾಂಬೆಯ ದರ್ಶನ ಪಡೆದು ಪುನೀತರಾಗಿದ್ದಾರೆ.

ಇಂದು ಮಧ್ಯಾಹ್ನ 12.23ಕ್ಕೆ ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್‌ ಮಾಡಲಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಸಲ್ಲಿಸಿ ಗರ್ಭಗುಡಿಯಿಂದ ಅರ್ಚಕರು, ಅಧಿಕಾರಿಗಳು ಹೊರಬಂದು ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಬೀಗ ಹಾಕಿದರು.ಹಾಸನಾಂಬೆ ದರ್ಶನ ಸಂಪನ್ನ: ಗರ್ಭಗುಡಿಯ ಬಾಗಿಲು ಬಂದ್ hasanambe (2) hasanambe 2

ಮುಂದಿನ ವರ್ಷಕ್ಕೆ ಹಾಸನಾಂಬೆ ದೇವಿಯ ದರ್ಶನೋತ್ಸವಕ್ಕೆ ದಿನಾಂಕ ಕೂಡ ನಿಗದಿ ಮಾಡಲಾಗಿದೆ. ಅಕ್ಟೋಬರ್.24ರಿಂದ ನವೆಂಬರ್.3ರವೆರೆಗೆ 9 ದಿನಗಳ ಕಾಲ ಭಕ್ತರ ದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

Key words: Hassanambe –temple- door- closed.