Friday, August 14, 2026

BDA Apartments

Home Front Page ಮಾಸಿಕ ಹುಂಡಿ ಎಣಿಕೆ: ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ..

ಮಾಸಿಕ ಹುಂಡಿ ಎಣಿಕೆ: ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ..

ಚಾಮರಾಜನಗರ,ನವೆಂಬರ್,8,2023(www.justkannada.in):  ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಬರೋಬ್ಬರಿ 2.10 ಕೋಟಿ ರೂ. ನಗದು ಸಂಗ್ರಹವಾಗಿದೆ ಈ ಮೂಲಕ ಮಲೆ ಮಹದೇಶ್ವರ ಕೋಟ್ಯಾಧಿಪತಿಯಾಗಿದ್ದಾನೆ.

ನಾಡಿನ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿ.ಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಿತು.

ಕಳೆದ 28 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ 2.10 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಹುಂಡಿಗಳ ಎಣಿಕೆಯಲ್ಲಿ ಬರೋಬ್ಬರಿ 2,10,78,014 ರೂ. ನಗದು ಸಂಗ್ರಹವಾಗಿದ್ದು, ಚಲಾವಣೆಯಲ್ಲಿಲ್ಲದ 2 ಸಾವಿರ ರೂ. ಮುಖಬೆಲೆಯ 32 ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.

Key words: Monthly- Hundi –Count-male mahadeshwara-2.10 crore Rs.- collected