Sunday, August 23, 2026

BDA Apartments

Home Front Page ಐಟಿ ದಾಳಿ ವೇಳೆ ಹಣ ಪತ್ತೆ ಪ್ರಕರಣ; ಗುತ್ತಿಗೆದಾರ ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು -ಕೆಂಪಣ್ಣ

ಐಟಿ ದಾಳಿ ವೇಳೆ ಹಣ ಪತ್ತೆ ಪ್ರಕರಣ; ಗುತ್ತಿಗೆದಾರ ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು -ಕೆಂಪಣ್ಣ

ಬೆಂಗಳೂರು,ಅಕ್ಟೋಬರ್,17,2023(www.justkannada.in): ಐಟಿ ದಾಳಿ ವೇಳೆ ಹಣ ಪತ್ತೆ ಪ್ರಕರಣ ಸಂಬಂಧ ಗುತ್ತಿಗೆದಾರ ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು  ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು,  ‘ನಾನು, ಗುತ್ತಿಗೆದಾರ ಅಂಬಿಕಾಪತಿ 45 ವರ್ಷಗಳಿಂದ ಸ್ನೇಹಿತರು. ‘ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು, ಸಿಎಂ ಮನೆಯಿಂದ ನಾನು ನೇರವಾಗಿ ನಮ್ಮ ಮನೆಗೆ ಹೋಗಿದ್ದೇನೆ. ಅಂಬಿಕಾಪತಿ‌ ಮನೆಗೆ ನಾನು ಹೋಗಿಲ್ಲ. ಈ ಆರೋಪ ಸಾಭೀತೂ ಮಾಡಿದ್ರೆ ಅವರ ಕಾಲಡಿ ಇರ್ತೇನೆ ಎಂದರು.

ತನಿಖೆಯಲ್ಲಿ ತಮ್ಮ ಗುತ್ತಿಗೆದಾರರ ಸಂಘದ ಸದಸ್ಯನ ತಪ್ಪಿದೆ ಅಂತ ಗೊತ್ತಾದರೆ ತನಿಖಾ ಸಂಸ್ಥೆ ನೀಡುವ ಶಿಕ್ಷೆಯನ್ನು ಅಂಗೀಕರಿಸುತ್ತೇವೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಕಮೀಷನ್ ಆರೋಪಕ್ಕೆ ಈಗಲೂ ಬದ್ಧ. ಒಬ್ಬ ನಿವೃತ್ತ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಅದರ ಮುಂದೆ ಮಾಡಿದ ಎಲ್ಲ ಆರೋಪಗಳಿಗೆ ಸಾಕ್ಷ್ಯ ಒದಗಿಸುವುದಾಗಿ ಕೆಂಪಣ್ಣ ಹೇಳಿದರು.

Key words: finding -money – IT attack- allegation- against – contractor -Ambikapati -Kempanna