Sunday, August 23, 2026

BDA Apartments

Home Front Page ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಮೈಸೂರು. ಅಕ್ಟೋಬರ್ 15, 2023 (www.justkannada.in): ನಗರ ವಸ್ತು ಪ್ರದರ್ಶನ ಪ್ರಾಧಿಕಾರದ ದೇವರಾಜು ಅರಸು ವಿವಿದೋದೇಶ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ v/s ದೆಹಲಿಯ ಪೈಲ್ವಾನ್ವಿ ವಿಕಿ ಅವರ ನಡುವೆ ನಡೆದ ಕುಸ್ತಿ ಪಂದ್ಯಾವಳಿಯನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ವೀಕ್ಷಿಸಿದರು.  ನಂತರ ಕುಸ್ತಿ ಪಟ್ಟು ಚಿಕ್ಕಳಿಯ ಪೈಲ್ವಾನ್ ರವಿ ಮತ್ತು ಪೈಲ್ವಾನ್ ಪವನ್ ಅವರ ನಡುವೆ ನಡೆಯಿತು.

ಆರಂಭಿಕ ಕುಸ್ತಿ ಪಂದ್ಯಾವಳಿಯು ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ v/s ದೆಹಲಿಯ ಪೈಲ್ವಾನ್ವಿ ವಿಕಿ, ಬೆಳಗಾಂ ನ ಸುನಿಲ್ ಪಡುತಾರೆ v/s ಪೈಲ್ವಾನ್ ರಾಹುಲ್ ರಾಟೆ ನಡುವೆ ನಡೆಯಲಿದೆ. ಬಾಲಕಿಯರ ವಿಭಾಗದಲ್ಲಿ ಬನ್ನೂರಿನ ಪೈಲ್ವಾನ್ ಜಾಹ್ನವಿ v/s ಮಂಡ್ಯದ ಪೈಲ್ವಾನ್ ಸ್ಫೂರ್ತಿ ಹಾಗೂ ರಮನಹಳ್ಳಿಯ ಪೈಲ್ವಾನ್ ಸಿಂಚನ v/s ಮಂಡ್ಯದ ಅಮೂಲ್ಯ ನಡುವೆ ಕುಸ್ತಿ ಪಂದ್ಯಾವಳಿಗಳ ಪ್ರಾರಂಭಗೊಂಡವು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಶಾಸಕರಾದ ಶ್ರಿವತ್ಸ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಡಿ ರವಿಶಂಕರ್, ಕೃಷ್ಣಮೂರ್ತಿ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ವಿಧಾನ ಪರಿಷತ್ ಶಾಸಕರಾದ ಮಂಜೇಗೌಡ, ಡಿ ತಿಮ್ಮಯ್ಯ, ಮಹಾ ಪೌರರದ ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಡಾ ಕೆ. ವಿ ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಪೊಲೀಸ್ ಅಧೀಕ್ಷಕರಾದ ಡಾ. ನಂದಿನಿ, ಉಪ ಮಹಾಪೌರರಾದ ಜಿ ರೂಪ, ಹಾಗೂ ದಸರಾ ಕುಸ್ತಿ ಸಮಿತಿಯ ಅಧಿಕಾರಿಗಳು ಭಾಗವಹಿಸಿದರು.