Sunday, August 23, 2026

BDA Apartments

Home Front Page ನ.5 ರಂದು ದಿವ್ಯಾಂಗರಿಗೆ ಮಾಡ್ಯುಲರ್ ಕೃತಕ ಅಂಗಗಳ ವಿತರಣಾ ಕಾರ್ಯಕ್ರಮ.

ನ.5 ರಂದು ದಿವ್ಯಾಂಗರಿಗೆ ಮಾಡ್ಯುಲರ್ ಕೃತಕ ಅಂಗಗಳ ವಿತರಣಾ ಕಾರ್ಯಕ್ರಮ.

ಮೈಸೂರು,ಅಕ್ಟೋಬರ್,5,2023(www.justkannada.in): ಲಯನ್ಸ್ ಕ್ಲಬ್ ಗೋಲ್ಡನ್ ಸಿಟಿ ವತಿಯಿಂದ ನಾರಾಯಣ ಸೇವಾ ಸಂಸ್ಥಾನದ ಸಹಯೋಗದಲ್ಲಿ  ನವೆಂಬರ್ 5 ರಂದು ಬೆಳಗ್ಗೆ  9 ರಿಂದ ಸಂಜೆ  5ರವರೆಗೆ ಶಂಕರಮಠ ರಸ್ತೆಯ ನಟರಾಜ ಪ್ರಾರ್ಥನಾ ಮಂದಿರದಲ್ಲಿ ಮಾಡ್ಯುಲರ್ ಕೃತಕ ಅಂಗಗಳನ್ನು ದಿವ್ಯಾಂಗರಿಗೆ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಗವರ್ನರ್ ಕೆ.ಎನ್. ಕೃಷ್ಣೇಗೌಡ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಸೌಲಭ್ಯದ ಪ್ರಯೋಜನ ಪಡೆಯಲು ಈಗಾಗಲೇ 180 ಮಂದಿ ವೀಶೇಷ ಚೇತನರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಈಗಲೂ ನೋಂದಾಯಿಸಿಕೊಳ್ಳುತಿದ್ದಾರೆ.  ಮಾಡ್ಯುಲರ್ ಕೃತಕ ಅಂಗಗಳನ್ನು ಪಡೆಯಲು ಅವಕಾಶವಿದೆ. ಹೀಗಾಗಿ ಆಸಕ್ತರು ದೂ.9845284727  ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಇನ್ನಿತರ ಪದಾಧಿಕಾರಿಗಳಾದ ಪ್ರಮೀಳಾ, ಮಹಾವೀರ್ ಚಾಂದ್ ಬನ್ಸಾಲಿ, ಸುರೇಶ್ ಗೋಲ್ಡ್, ಎಸ್. ಗುರುರಾಜ್,  ಲಯನ್ ಮೈಸೂರು ಅಧ್ಯಕ್ಷರಾದ ಲಯನ್ ರವಿಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Key words: Distribution -program – modular -Disabled people- Nov 5.