Tuesday, August 11, 2026

BDA Apartments

Home Front Page ಡಿಕೆಶಿ ಮತ್ತೆ ತಿಹಾರ್ ಗೆ ಹೋಗುತ್ತಾರೆ ಎಂಬ ಹೆಚ್.ಡಿಕೆ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು.

ಡಿಕೆಶಿ ಮತ್ತೆ ತಿಹಾರ್ ಗೆ ಹೋಗುತ್ತಾರೆ ಎಂಬ ಹೆಚ್.ಡಿಕೆ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು, ಅಕ್ಟೋಬರ್​​ ,9,2023(www.justkannada.in): ಡಿ.ಕೆ ಶಿವಕುಮಾರ್ ಮತ್ತೆ ತಿಹಾರ್ ಗೆ ಹೋಗುವ ಕಾಲ ಬರುತ್ತದೆ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್,ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಏನು‌ ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ ಎಂದರು.

ಅವರ ಪ್ಲ್ಯಾನ್​ ಏನಿದೆ ಎಂದು ಹೇಳುತ್ತಿದ್ದಾರೆ. ಏನೆಲ್ಲ ಮಾಡಲು‌ ಸಾಧ್ಯ ಎಲ್ಲವನ್ನೂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಿಂದೆನೂ ಪಾಪ ಮಾಡಿದ್ರಲ್ಲ. ನನ್ನ ತಂಗಿ, ನನ್ನ ತಮ್ಮ, ಹೆಂಡತಿ ಮೇಲೆ ಕೇಸ್ ಹಾಕಿದ್ದರು ಎಂದು  ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

Key words: DCM -DK Shivakumar –Former CM- HD Kumaraswamy- statement