Sunday, August 23, 2026

BDA Apartments

Home Front Page ಸಂಸದರ ಅಣುಕು ಶವಯಾತ್ರೆ:  ಸಿಎಂ ಸಿದ್ಧರಾಮಯ್ಯ ಹಾಗೂ ಸ್ಟಾಲಿನ್ ಫೋಟೊ ಮೇಲೆ ರಕ್ತ ಚೆಲ್ಲಿ ಪ್ರತಿಭಟನೆ.

ಸಂಸದರ ಅಣುಕು ಶವಯಾತ್ರೆ:  ಸಿಎಂ ಸಿದ್ಧರಾಮಯ್ಯ ಹಾಗೂ ಸ್ಟಾಲಿನ್ ಫೋಟೊ ಮೇಲೆ ರಕ್ತ ಚೆಲ್ಲಿ ಪ್ರತಿಭಟನೆ.

ಚಿತ್ರದುರ್ಗ,ಸೆಪ್ಟಂಬರ್,29,2023(www.justkannad.in): ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ರಾಜ್ಯದಲ್ಲಿ ಪ್ರತಿಭಟನೆ, ಹೋರಾಟದ ಕಿಚ್ಚು ಕಾವೇರಿದ್ದು, ಇಂದು ರಾಜ್ಯದ ವಿವಿಧೆ ಕನ್ನಡಪರ, ರೈತಪರ ಸಂಘಟನೆಗಳು ಬೀದಿಗಿಳಿದು ಧರಣಿ ನಡೆಸುತ್ತಿವೆ.

ಈ ಮಧ್ಯೆ ಚಿತ್ರದುರ್ಗದಲ್ಲಿ  ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸುತ್ತಿದ್ದು,  ಪ್ರತಿಭಟನಾಕಾರರು ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ ಸಂಸದರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ತಡೆದ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಹಾಗೆಯೇ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ  ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಕರುನಾಡ ವಿಜಯಸೇನೆ  ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಸಿಎಂ ಸಿದ್ಧರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ್ ಚಿತ್ರದ ಮೇಲೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲೂ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ರಿ ಕರ್ನಾಟಕದ 28 ಸಂಸದ ಭಾವಚಿತ್ರ ಹಿಡಿದು ಅಣಕು ಪ್ರದರ್ಶನ ನಡೆಸಿದರು.  ಭಾವಚಿತ್ರದ ಮುಂದೆ ಖಾಲಿ ಬಿಂದಿಗೆ ಹಿಡಿದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Key words: caveri dispute-protest-chitradurga-karave