Wednesday, October 7, 2026

BDA Apartments

immense respect BDA JK_Adv BDA Adv
Home Front Page ಮೈಸೂರಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ: ವಿದೇಶಿ ಪ್ರವಾಸಿಗರಿಗೆ ಆರತಿ ಬೆಳಗುವ ಮೂಲಕ ಚಾಲನೆ.

ಮೈಸೂರಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ: ವಿದೇಶಿ ಪ್ರವಾಸಿಗರಿಗೆ ಆರತಿ ಬೆಳಗುವ ಮೂಲಕ ಚಾಲನೆ.

ಮೈಸೂರು,ಸೆಪ್ಟಂಬರ್,27,2023(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಪಾಲುದಾರರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಅರಮನೆಯ ವರಹ ದ್ವಾರದ ಬಳಿಗೆ ಜಾಥಾ ಮೂಲಕ ವಿವಿಧ ಕಲಾತಂಡಗಳು ಜಮಾಯಿಸಿದ್ದು,  ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಕಿಯರು ಹಾಗೂ ರಾಜಯೋಗ ವಿದ್ಯಾರ್ಥಿಗಳು ಜಾಥದಲ್ಲಿ ಭಾಗಿಯಾಗಿದ್ದರು.

ಈ ವೇಳೆ ವಿದೇಶಿ ಪ್ರವಾಸಿಗರಿಗೆ ಆರತಿ ಬೆಳಗುವ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಡಾ.ಕೆವಿ ರಾಜೇಂದ್ರ, ಜಿ.ಪಂ ಸಿಇಓ ಕೆ.ಎಂ ಗಾಯಿತ್ರಿ, ಪೋಲಿಸ್ ಆಯುಕ್ತ ಬಿ.ರಮೇಶ್, ಎಸ್ಪಿ ಸೀಮಾ ಲಾಟ್ಕರ್ ಪ್ರವಾಸೋದ್ಯಮ ಇಲಾಖೆ ಡಿ.ಡಿ ಸವಿತಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: World Tourism Day -celebration – Mysore