Wednesday, October 7, 2026

BDA Apartments

immense respect BDA JK_Adv BDA Adv
Home Front Page ಅವತ್ತೆ ನಾನು ಒಪ್ಪಿದ್ದರೇ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಅವತ್ತೆ ನಾನು ಒಪ್ಪಿದ್ದರೇ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಸೆಪ್ಟಂಬರ್,27,2023(www.justkannada.in):  ಬಿಜೆಪಿ ಜೊತೆ ಆಗಲೇ ಮೈತ್ರಿ ಮಾಡಿಕೊಂಡಿದ್ದರೆ ನಾನು 5 ವರ್ಷ ಸಿಎಂ ಆಗುತ್ತಿದ್ದೆ ಎಂದು ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಅವತ್ತೆ ನಾನು ಒಪ್ಪಿದ್ದರೇ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ- ಮಾಜಿ ಸಿಎಂ ಹೆಚ್....

ಈ ವೇಳೆ ಮಾತನಾಡಿದ ಹೆಚ್ ಡಿಕೆ, ನಾನು ಅಲ್ಪಸಂಖ್ಯಾತರೇ ಅಲ್ಲ, ಎಲ್ಲ ಸಮುದಾಯಗಳ ರಕ್ಷಣೆ ಮಾಡುತ್ತೇವೆ. ಮಹಾನಾಯಕರು  ಜೆಡಿಎಸ್ ಪಕ್ಷವನ್ನ ಬಿಜೆಪಿ ಬಿ ಟೀಮ್ ಅಂತ ಹೇಳ್ತಾ ಇದ್ದಾರೆ.  2018 ರಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ,‌ಡಿಕೆ ಶಿವಕುಮಾರ್, ಪರಮೇಶ್ವರ್ ಇದ್ದರು. ನಮ್ಮ ಪಕ್ಷಕ್ಕೆ ನನ್ನ ಮಗನಿಗೆ ಸಿಎಂ ಸ್ಥಾನ ಬೇಡ ಅಂತ‌ ದೇವೇಗೌಡರು ಹೇಳಿದ್ದರು. ಕಾಂಗ್ರೆಸ್ ಕೇಂದ್ರ ನಾಯಕರು ಇಲ್ಲ ಕುಮಾರಸ್ವಾಮಿ ಸಿಎಂ ಆಗಬೇಕು ಅಂದ್ರು. ಅವತ್ತೆ ಮಧ್ಯಾಹ್ನ 2 ಗಂಟೆಗೆ ಅಮಿಶ್ ಶಾ ಕಾಲ್ ಮಾಡಿದ್ರು. ಅವತ್ತೆ ನಾನು ಒಪ್ಪಿದಿದ್ರೆ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ ಎಂದು ಹೇಳಿದರು.

Key words: bjp-allince- CM – five years – former CM-HD Kumaraswamy.