Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Cinema ಖ್ಯಾತ ಕ್ರಿಕೆಟಿಗನ ಜೊತೆ ಹಸೆಮಣೆ ಏರಲಿದ್ದಾರೆ ನಟಿ ಪೂಜಾ ಹೆಗ್ಡೆ

ಖ್ಯಾತ ಕ್ರಿಕೆಟಿಗನ ಜೊತೆ ಹಸೆಮಣೆ ಏರಲಿದ್ದಾರೆ ನಟಿ ಪೂಜಾ ಹೆಗ್ಡೆ

ಬೆಂಗಳೂರು, ಸೆಪ್ಟೆಂಬರ್ 26, 2023 (www.justkannada.in): ಟಾಲಿವುಡ್‌ ಬೆಡಗಿ, ನಟಿ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ಹೌದು. ನಾಗಚೈತನ್ಯ ಅಭಿನಯದ ‘ಒಕಾ ಲೈಲಾ ಪಾರೋ’ ಸಿನಿಮಾ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಪೂಜಾ ಹೆಗ್ಡೆ ಕ್ರಿಕೆಟಿಗನ ಜೊತೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಡಿದೆ.

ಪೂಜಾ ಹೆಗ್ಡೆ ಸಪ್ತಪದಿ ತುಳಿಯಲಿರುವ ಆ ಕ್ರಿಕೆಟರ್‌ ಯಾರು ಎಂಬುದು ಇನ್ನು ಬಹಿರಂಗವಾಗಿಲ್ಲ. ಸಾಲು ಸಾಲು ಸೋಲಿನ ಸಿನಿಮಾಗಳಿಂದ ಕಂಗೆಟ್ಟಿರುವ ಪೂಜಾ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಪೂಜಾ ನಟನೆಯ ರಾಧೇಶ್ಯಾಮ್‌ನಿಂದ ಹಿಡಿದು ಬೀಸ್ಟ್ ಮತ್ತು ಆಚಾರ್ಯ ನಂತರ ನಟಿಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿವೆ.