Sunday, August 23, 2026

BDA Apartments

Home Front Page ತಮಿಳುನಾಡಿಗೆ 12,500 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಲು ಕೇಂದ್ರಕ್ಕೆ ಮನವಿ: ಸ್ಟಾಲಿನ್

ತಮಿಳುನಾಡಿಗೆ 12,500 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಲು ಕೇಂದ್ರಕ್ಕೆ ಮನವಿ: ಸ್ಟಾಲಿನ್

ಬೆಂಗಳೂರು, ಸೆಪ್ಟೆಂಬರ್ 17, 2023 (www.justkannada.in): ತಮಿಳುನಾಡಿಗೆ 12,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಕೋರಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ತಿಳಿಸಿದ್ದಾರೆ.

ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಕರ್ನಾಕಟವು ದೋಷಪೂರಿತ ಮತ್ತು ಆಧಾರರಹಿತ ವಾದಗಳನ್ನು ಮಾಡುತ್ತಿದೆ. ಇದನ್ನೆಲ್ಲ ಪರಿಗಣಿಸಬಾರದು ಎಂದು ಮನವಿ ಮಾಡಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡಿನ ಎಲ್ಲ ಪಕ್ಷಗಳ ಸಂಸದರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಕಾವೇರಿ ನೀರು ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದಾರೆ ಎಂದಿದ್ದಾರೆ.

ಈ ವರ್ಷದ ಸೆ.14ರವರೆಗೆ ರಾಜ್ಯಕ್ಕೆ 103.5 ಟಿಎಂಸಿ ಅಡಿ ನೀರು ಬಿಡಗಡೆಯಾಗಬೇಕಿತ್ತು. ಆದರೆ ಕೇವಲ 38.4 ಟಿಎಂಸಿ ಅಡಿ ನೀರು ಬಿಡಲಾಗಿದ್ದು ಇನ್ನೂ 65.1 ಟಿಎಂಸಿ ಅಡಿ ನೀರು ನಮಗೆ ಕೊರತೆಯಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.