ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ: ಶುಭಾಶಯಗಳ ಮಹಾಪೂರ

ಬೆಂಗಳೂರು, ಸೆಪ್ಟೆಂಬರ್ 17, 2023 (www.justkannada.in): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

73 ವರ್ಷಗಳನ್ನು ಪೂರೈಸಿ ಇಂದಿಗೆ 74ನೇ ವರ್ಷದ ಹುಟ್ಟುಬ್ಬದ ಸಂಭ್ರಮದಲ್ಲಿರುವ ಪ್ರಧಾನಿಗೆ ರಾಷ್ಟ್ರಪತಿ ಸೇರಿದಂತೆ ದೇಶದ ರಾಜಕೀಯ ಗಣ್ಯರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ವಿದೇಶಗಳ ಗಣ್ಯರಿಂದಲೂ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾದ ಶುಭಹಾರೈಕೆಗಳು ಬರುತ್ತಿವೆ. ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರೆಟಿಗಳಿಂದ ನೆಚ್ಚಿನ ಪ್ರಧಾನಿಗೆ ಜನ್ಮದಿನದ ಶುಭ ಕೋರುತ್ತಿದ್ದಾರೆ.

ದೇಶದ ವಿವಿಧೆಡೆ ಮೋದಿ ಅಭಿಮಾನಿಗಳು ನಾನಾ ಕಾರ್ಯಕ್ರಮ, ಪೂಜೆ, ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.