Sunday, August 16, 2026

BDA Apartments

Home Front Page ಸಿಎಂ ಸಿದ‍್ಧರಾಮಯ್ಯ ಕುರಿತು ಬಿ.ಕೆ ಹರಿಪ್ರಸಾದ್ ಸತ್ಯವನ್ನೇ ಹೇಳಿದ್ದಾರೆ- ಎಂಎಲ್ ಸಿ ರವಿಕುಮಾರ್.

ಸಿಎಂ ಸಿದ‍್ಧರಾಮಯ್ಯ ಕುರಿತು ಬಿ.ಕೆ ಹರಿಪ್ರಸಾದ್ ಸತ್ಯವನ್ನೇ ಹೇಳಿದ್ದಾರೆ- ಎಂಎಲ್ ಸಿ ರವಿಕುಮಾರ್.

ಬೆಂಗಳೂರು,ಸೆಪ್ಟಂಬರ್,12,2023(www.justkannada.in): ಸಿದ್ಧರಾಮಯ್ಯರನ್ನ ಬಿ.ಕೆ ಹರಿಪ್ರಸಾದ್ ಮಜವಾದಿ ಎಂದಿದ್ದಾರೆ. ಬಿ.ಕೆ ಹರಿಪ್ರಸಾದ್ ಹೇಳಿರುವುದು ಸತ್ಯ ಎಂದು ಬಿಜೆಪಿ ಎಂಎಲ್ ಸಿ ರವಿಕುಮಾರ್ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರವಿಕುಮಾರ್,  ಸಿದ್ಧರಾಮಯ್ಯ ಭ್ರಷ್ಟಾಚಾರದ ಪೋಷಕ. ಕಾಂಗ್ರೆಸ್ ನ ಹಲವು ಶಾಸಕರು ಸಿಎಂ ವಿರುದ್ದ ಇದ್ದಾರೆ. ಬಿಕೆ ಹರಿಪ್ರಸಾದ್ ಗೆ ಹಿಂದಿನಿಂದಲೂ ಡಿಕೆ ಶಿವಕುಮಾರ್ ಬೆಂಬಲವಿದೆ ಎಂದರು.

ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದ  ಎನ್. ರವಿಕುಮಾರ್,  ಕಾಗೆಗಳಿಗೆ ಇರುವ ಸಾಮಾನ್ಯ ಬುದ್ಧಿಯೂ ಪ್ರಕಾಶ್ ರಾಜ್​ಗೆ ಇಲ್ಲ. ಕಾಗೆ ಹಂಚಿಕೊಂಡು ತಿನ್ನುವ ಪಕ್ಷಿ. ಪ್ರಕಾಶ್ ರಾಜ್ ಕೆಟ್ಟದ್ದನ್ನೇ ಯೋಚನೆ ಮಾಡುವ ಪ್ರಾಣಿ. ಆ ಪ್ರಾಣಿಯ ಹೆಸರು ನಾನು ಹೇಳಲ್ಲ. ಎಲ್ಲಾ ಧರ್ಮಗಳಲ್ಲೂ ಕೆಲವು ಲೋಪಗಳಿವೆ, ಮನುಷ್ಯನಲ್ಲೂ ಕೊರತೆ ಇವೆ. ಕೆಟ್ಟದ್ದನ್ನೇ ಮಾತಾಡುವ ಪ್ರಾಣಿ ಅಂದರೆ ಅದು ಪ್ರಕಾಶ್ ರಾಜ್ ಎಂದು ಕಿಡಿಕಾರಿದರು.

Key words: BK Hariprasad – truth –about- CM Siddaramaiah-MLC -Ravikumar.