Sunday, August 9, 2026

BDA Apartments

Home Front Page ಇನ್ಮುಂದೆ ಯಾವುದೇ ವರ್ಗಾವಣೆಗೂ ಸಿಎಂ ಪೂರ್ವಾನುಮತಿ ಕಡ್ಡಾಯ.

ಇನ್ಮುಂದೆ ಯಾವುದೇ ವರ್ಗಾವಣೆಗೂ ಸಿಎಂ ಪೂರ್ವಾನುಮತಿ ಕಡ್ಡಾಯ.

ಬೆಂಗಳೂರು,ಸೆಪ್ಟಂಬರ್,2,2023(www.justkannada.in): ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವರ್ಗಾವಣೆ  ದಂಧೆ ಆರೋಪ ಕೇಳಿ ಬಂದ ಹಿನ್ನೆಲೆ ಎಚ್ಚೆತ್ತುಕೊಂಡ ಸರ್ಕಾರ ಇನ್ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಪೋಸ್ಟಿಂಗ್ ಗೆ  ಸಿಎಂ ಪೂರ್ವಾನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿದೆ.

ಇಲಾಖಾವಾರು ವರ್ಗಾವಣೆ ಮಾಡಲು ಮುಖ್ಯಮಂತ್ರಿಗಳ ಅನುಮತಿ ಪಡೆಯಬೇಕು.  ಯಾವುದೇ ವರ್ಗಾವಣೆಗೂ ಸಿಎಂ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಕಾರ್ಯದರ್ಶಿಯ ಅವರು  ಸುತ್ತೋಲೆ ಹೊರಡಿಸಿದ್ದಾರೆ, ಸಿಎಂ ಪೂರ್ವಾನುಮತಿ ಪಡೆಯದೇ ವರ್ಗಾವಣೆ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ.

ಅನುಮತಿ ಪಡೆಯದಿದ್ದರೆ ಸರ್ಕಾರದ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಇಲಾಖೆಯ ಮುಖ್ಯಸ್ಥರೇ ನೇರ ಹೊಣೆಗಾರರಾಗುತ್ತಾರೆ. ಒಂದು ವೇಳೆ ವರ್ಗಾವಣೆ ಮಾಡಿ, ನಂತರ ಸಿಎಂ ಅವರ ಅನುಮತಿ ಪಡೆಯುವ ಅವಕಾಶವೂ ಇಲ್ಲ ಎಂದೂ ಸುತ್ತೋಲೆಯಲ್ಲಿ  ತಿಳಿಸಿದೆ.

Key words: CM’s -prior approval – mandatory –any- transfer