ಅಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತೆ: ಬಿಎಲ್ ಸಂತೋಷ್ ಉತ್ತರಿಸಲಿ- ಸಚಿವ ಪ್ರಿಯಾಂಕ್ ಖರ್ಗೆ ಸವಾಲು.

ಬೆಂಗಳೂರು, ಸೆಪ್ಟಂಬರ್,2,2023(www.justkannada.in):   ಕಾಂಗ್ರೆಸ್ ನ 40 ರಿಂದ 45 ಶಾಸಕರು ಬಿಜೆಪಿ ಸರ್ಕಾರದಲ್ಲಿದ್ದಾರೆ ಎಂದ  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ  ಬಿಎಲ್ ಸಂತೋಷ್ ಗೆ  ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತಿದೆ? ಇದಕ್ಕೆ  ಬಿಎಲ್ ಸಂತೋಷ್ ಅವರು ಉತ್ತರ ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಮಾತನಾಡಿದ  ಸಚಿವ ಪ್ರಿಯಾಂಕ್ ಖರ್ಗೆ, ಮೊದಲು ಅವರ ಶಾಸಕರು, ಸಂಸದರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಲಿ. ಬಳಿಕ ಕಾಂಗ್ರೆಸ್ ಶಾಸಕರ ಬಗ್ಗೆ ಮಾತನಾಡಲಿ. ಒಂದು ದಿನ ಅಲ್ಲ ಒಂದು ತಿಂಗಳ ಸಮಯ ನೀಡುತ್ತೇನೆ. 45 ಶಾಸಕರಲ್ಲ, ನಾಲ್ಕು ಜನ ಶಾಸಕರನ್ನು ಕರೆದುಕೊಂಡು ಹೋಗಿ ನೋಡೋಣ ಎಂದು ಸವಾಲು ಹಾಕಿದರು.

Key words: money -Operation Kamala – BL Santhosh –answer-Minister- Priyank Kharge.