Friday, September 18, 2026

BDA Apartments

ಐಸಿಸಿ ಏಕದಿನ ವಿಶ್ವಕಪ್: ಇಂದು ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಮಾರಾಟ BDA JK_Adv BDA Adv
Home Front Page ಐಸಿಸಿ ಏಕದಿನ ವಿಶ್ವಕಪ್: ಇಂದು ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಮಾರಾಟ

ಐಸಿಸಿ ಏಕದಿನ ವಿಶ್ವಕಪ್: ಇಂದು ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಮಾರಾಟ

ಬೆಂಗಳೂರು, ಆಗಸ್ಟ್ 31, 2023 (www.justkannada.in): ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯು ಭಾರತದಲ್ಲಿ ಅಕ್ಟೋಬರ್ 5ರಿಂದ ಆರಂಭವಾಗಲಿದೆ. ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತ ತಂಡದ ಪಂದ್ಯಗಳ ಟಿಕೆಟ್ ಮಾರಾಟ ಇಂದು (ಗುರುವಾರ ಆಗಸ್ಟ್ 31) ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಲಿದೆ.

ಟಿಕೆಟ್‌ಗಳು ಅಧಿಕೃತ ಟಿಕೆಟಿಂಗ್ ವೆಬ್‌ಸೈಟ್‌ BookMyShowನಲ್ಲಿ ಲಭ್ಯವಿರುತ್ತವೆ ಮತ್ತು tickets.cricketworldcup.com. ಭೇಟಿ ನೀಡಬಹುದು ಎಂದು ಬಿಸಿಸಿಐ ತಿಳಿಸಿದೆ.

ಅಂದಹಾಗೆ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಅಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 19ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (ಎಂಸಿಎ) ಬಾಂಗ್ಲಾದೇಶ ವಿರುದ್ಧ ಭಾರತದ ಪಂದ್ಯ ನಿಗದಿಯಾಗಿದೆ.

ಸೆಪ್ಟೆಂಬರ್ 1ರಂದು ಧರ್ಮಶಾಲಾ, ಲಕ್ನೋ ಮತ್ತು ಮುಂಬೈನಲ್ಲಿ ನಡೆಯುವ ಭಾರತ ತಂಡದ ಪಂದ್ಯಗಳ ಟಿಕೆಟ್‌ಗಳು ಮಾರಾಟ ಆರಂಭವಾಗಲಿದ್ದರೆ, ಸೆಪ್ಟೆಂಬರ್ 2 ರಂದು ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿನ ಭಾರತ ತಂಡದ ಪಂದ್ಯಗಳ ಟಿಕೆಟ್‌ಗಳು ಮಾರಾಟವಾಗಲಿವೆ.

ಸೆಪ್ಟೆಂಬರ್ 3ರಂದು ಅಹಮದಾಬಾದ್‌ನಲ್ಲಿನ ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯದ ಟಿಕೆಟ್ ಮಾರಾಟ ನಡೆಯಲಿದ್ದರೆ, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯದ ಟಿಕೆಟ್‌ಗಳು ಸೆಪ್ಟೆಂಬರ್ 15ರಂದು ಮಾರಾಟ ಮಾಡಲಾಗುತ್ತದೆ.