Monday, August 31, 2026

BDA Apartments

Home Front Page ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮತ್ತು ಪುತ್ರನ ರಾಜಕೀಯಕ್ಕೆ ಎಂಟ್ರಿ ಕುರಿತು ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟನೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮತ್ತು ಪುತ್ರನ ರಾಜಕೀಯಕ್ಕೆ ಎಂಟ್ರಿ ಕುರಿತು ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟನೆ.

ಬೆಂಗಳೂರು,ಆಗಸ್ಟ್,24,2023(www.justkannada.in): ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಹುಚ್ಚು ಇಲ್ಲ. ನನ್ನ ಮಗ ನಿಶಾಂತ್ ರಾಜಕಾರಣಕ್ಕೆ  ಬರುವುದಿಲ್ಲ ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್,  ಲೋಕಸಭಾ ಚುನಾವಣೆಗೆ ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ.  ನನ್ನ ಮಗ ನಿಶಾಂತ್ ರಾಜಕಾರಣ ಮಾಡುವುದಿಲ್ಲ. ನನಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಹುಚ್ಚಿಲ್ಲ ಎಂದರು.

ಬಿಜೆಪಿ ಬಿಡುವ ನಿರ್ಧಾರ ಕೈಗೊಂಡಿಲ್ಲ-ಶಾಸಕ ಶಿವರಾಂ ಹೆಬ್ಬಾರ್.

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಬ್ಬಿದ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಶಿವರಾಂ ಹೆಬ್ಬಾರ್, ಬಿಜೆಪಿ ಬಿಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ.  ಅಭಿಮಾನಿಗಳು ಬೆಂಬಲಿಗರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ನಾವು ಬಿಜೆಪಿ ಬಿಡುತ್ತೇವೆ ಅನ್ನೋ ವಿಚಾರ ಯಾಕೆ ಬಂತೋ ಗೊತ್ತಿಲ್ಲ ನಾವು ಬಿಜೆಪಿ ಬಿಡಲ್ಲ ಇಲ್ಲೇ ಇರುತ್ತೇವೆ. ಸದ್ಯ ನಾವು ಮಾತಾಡಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ ಎಂದರು.

Key words: MLA -ST Somashekhar- clarified – competition – LokSabha-elections