ಬೆಲೆ ಬಾಳುವ ಅಮೂಲ್ಯ ಕಲ್ಲಿನ ವಿಗ್ರಹ ಕಳ್ಳತನಕ್ಕೆ ಯತ್ನ: 6 ಮಂದಿ ಬಂಧನ.

ಮೈಸೂರು,ಆಗಸ್ಟ್,24,2023(www.justkannada.in): ಬೆಲೆ ಬಾಳುವ ಅಮೂಲ್ಯ ಕಲ್ಲಿನ ವಿಗ್ರಹ ಕಳ್ಳತನ ಮಾಡಲು ಯತ್ನಿಸಿದ 6 ಮಂದಿಯನ್ನ ಮೈಸೂರು ಮೇಟಗಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮೈಸೂರಿನ ಗೋಕುಲಂ 3ನೇ ಹಂತದ ನಿವಾಸಿ ಮನೋಜ್(26), ಕೆ.ಸಚಿನ್ (24), ನಾಗನಹಳ್ಳಿ ನಿವಾಸಿ ಎನ್. ಸಂತೋಷ್ ಕುಮಾರ್(33), ನಂಜನಗೂಡು ತಾಲೂಕು ತಾಲೂರು ಗ್ರಾಮದ ಚಂದ್ರಶೇಖರ ಮೂರ್ತಿ(42), ಮೆಲ್ಲಹಳ್ಳಿ ಗ್ರಾಮದ ಗೋಪಾಲ್ (36), ಭುಗತಗಳ್ಳಿ ನಿವಾಸಿ ನಾಗೇಶ(30) ಬಂಧಿತ ಆರೋಪಿಗಳು. ಮೈಸೂರು ಬೆಂಗಳೂರು ಹೆದ್ದಾರಿಯ ನಾಗನಹಳ್ಳಿ ಗೇಟ್ ಬಳಿ ಆರು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಸ್ತೂರಿ ನಿವಾಸ ಹೋಟೆಲ್ ಪಕ್ಕದ ಕಲ್ಲಿನ ವಿಗ್ರಹ ತಯಾರಿಸುವ ಕಾರ್ಯಾಗಾರದಿಂದ 2 ಲಕ್ಷ ರೂ. ಮೌಲ್ಯದ ಒಂದು ಜೊತೆ ಕಲ್ಲಿನ ಆನೆ ವಿಗ್ರಹವನ್ನ  ಸಾಗಿಸಲು ಯತ್ನಿಸಿದ್ದರು. ಟಾಟಾ ಜೀಪ್ ವಾಹನದಲ್ಲಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ ಇನ್ಸ್ ಪೆಕ್ಟರ್ ದಿವಾಕರ್‌ ನೇತೃತ್ವದ ತಂಡ ಆರು ಮಂದಿಯನ್ನ ಬಂಧಿಸಿದ್ದು, ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  attempt – steal – precious- stone idol- arrested- mysore