Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಬಿಜೆಪಿ ಬಿಡುವ ಬಗ್ಗೆ 4 ದಿನಗಳಲ್ಲಿ ತೀರ್ಮಾನ- ಶಾಸಕ ಎಸ್.ಟಿ ಸೋಮಶೇಖರ್.

ಬಿಜೆಪಿ ಬಿಡುವ ಬಗ್ಗೆ 4 ದಿನಗಳಲ್ಲಿ ತೀರ್ಮಾನ- ಶಾಸಕ ಎಸ್.ಟಿ ಸೋಮಶೇಖರ್.

ಬೆಂಗಳೂರು,ಆಗಸ್ಟ್,22,2023(www.justkannada.in):  ಬಿಜೆಪಿ ಬಿಡುವ ಬಗ್ಗೆ ನಾಲ್ಕು ದಿನಗಳಲ್ಲಿ ತೀರ್ಮಾನಿಸುತ್ತೇನೆ ಎಂದು ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಎಸ್.ಟಿ ಸೋಮಶೇಖರ್, ನಾನು ಮಾನಸಿಕವಾಗಿ ಬಿಜೆಪಿಯಲ್ಲೇ ಇದ್ದೇನೆ. ಬಿಜೆಪಿ ನಾಯಕರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳದಂತೆ ತಿಳಿಸಿದ್ದಾರೆ. ಈಗಿನ ಪರಿಸ್ಥಿತಿ ತಿಳಿಯಾದ್ರೆ, ನನ್ನ ಬೇಡಿಕೆ ಈಡೇರಿದ್ರೆ ಇಲ್ಲೇ ಮುಂದುವರೆಯುತ್ತೇನೆ ಎಂದರು.

ಬಿಜೆಪಿ ಬಿಡುವ ಬಗ್ಗೆ 4 ದಿನಗಳಲ್ಲಿ ತೀರ್ಮಾನವಾಗಲಿದೆ.   ಎಲ್ಲಾ ಗೊಂದಲಕ್ಕೆ ಮೂರ್ನಾಲ್ಕು ದಿನಗಳಲ್ಲಿ ತೆರೆ ಬೀಳಲಿದೆ. ದೆಹಲಿಗೆ ಬರುವಂತೆ ನಾಯಕರು ಬುಲಾವ್ ನೀಡಿದ್ದಾರೆ.  ದೆಹಲಿ ನಾಯಕರ ಬಳಿ ಅಸಮಾಧಾನ ಬಗ್ಗೆ ಚರ್ಚೆ ಮಾಡುತ್ತೇನೆ.   ದೆಹಲಿ ನಾಯಕರ ನಿರ್ಧಾರದ ಮೇಲೆ ನನ್ನ ನಿರ್ಧಾರ ಇರಲಿದೆ. ಯಶವಂತಪುರದ ಒಳ್ಳೆ ವಾತಾವರಣ ಕೆಡಿಸಿದ್ದಾರೆ.  ಗೊಂದಲ ಸರಿಪಡಿಸಿದರೇ ಮಾತ್ರ ಬಿಜೆಪಿಯಲ್ಲಿ ಮುಂದುವರೆಸುತ್ತೇನೆ ಎಂದು ಎಸ್ ಟಿ ಸೋಮಶೇಖರ್ ತಿಳಿಸಿದರು.

Key words: Decision- about- leaving -BJP – 4 days – MLA -ST Somashekhar.