ತಮಿಳುನಾಡಿನವರಿಗೆ ಸಮಸ್ಯೆ ಇದೆ. ಅದಕ್ಕೆ ಕಾವೇರಿ ನೀರು ಬಿಟ್ಟಿದ್ದೇವೆ- ಡಿಸಿಎಂ ಡಿ.ಕೆ ಶಿವಕುಮಾರ್ ಸಮರ್ಥನೆ.

ಹಾಸನ,ಆಗಸ್ಟ್,22,2023(www.justkannada.in): ರಾಜ್ಯದಲ್ಲಿ ಸರಿಯಾದ ಮಳೆಯಾಗದೇ ಜಲಾಶಯಗಳು ಭರ್ತಿಯಾಗದೇ ರೈತರು ಆತಂಕಕ್ಕೀಡಾಗಿದ್ದಾರೆ. ಆದರೂ ಸಹ ತಮಿಳುನಾಡಿಗೆ ಕಾವೇರಿ ನದಿ ನೀರನ್ನ ಹರಿಸಲಾಗಿದ್ದು ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್  ತಮಿಳುನಾಡಿನವರಿಗೆ ಸಮಸ್ಯೆ ಇದೆ.  ಅದಕ್ಕೆ ಕಾವೇರಿ  ನೀರು ಬಿಟ್ಟಿದ್ದೇವೆ. ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಡಲಾಗಿದೆ ಎಂದು ಹೇಳಿದ್ದಾರೆ.

ಕಾವೇರಿ ನೀರು ಬಿಟ್ಟಿದ್ದಕ್ಕೆ ಬಿಜೆಪಿ ಪ್ರತಿಭಟನೆ ಬಗ್ಗೆ ಲೇವಡಿ ಮಾಡಿದ ಡಿ.ಕೆ ಶಿವಕುಮಾರ್, ಬಿಜೆಪಿ ಅವರು ಅವರ  ಅಸ್ತಿತ್ವವನ್ನ ತೋರಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ . ರಾಜಕೀಯಪ್ರೇರಿತ ಪ್ರತಿಭಟನೆ ತಡೆಯಲು ಆಗುತ್ತಾ..? ಎಂದು ಪ್ರಶ್ನಿಸಿದರು.

ತಮಿಳನುನಾಡು ಸರ್ಕಾರ  ಸುಪ್ರೀಂಕೋರ್ಟ್ ಮೊರೆ ಹೋಗಿದೆ.  ಅವರಿಗೆ ಸಮಸ್ಯೆಯಾಗಿದ್ದಕ್ಕೆ   ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ತಮಿಳುನಾಡಿನ ರೈತರಿಗೆ ಸಮಸ್ಯೆ ಇದೆ.  ಅದಕ್ಕಾಗಿ ನಾವು ನೀರು ಬಿಟ್ಟಿದ್ದೇವೆ. ನಾಳೆ ಸರ್ವಪಕ್ಷ ಸಭೆ ಕರೆದಿದ್ದೇವೆ. ವಿಪಕ್ಷಗಳು ಸಹಕಾರ ಕೊಡುವ ವಿಶ್ವಾಸವಿದೆ  ಎಂದಿದ್ದಾರೆ.

Key words: Tamilnadu-people – problem-kavari water – DCM -DK Shivakumar