Sunday, August 23, 2026

BDA Apartments

Home Front Page ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಆಕಸ್ಮಿಕ ಬೆಂಕಿ:  8 ರಿಂದ10 ಮಂದಿ ನೌಕರರಿಗೆ ತೀವ್ರ ಗಾಯ.

ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಆಕಸ್ಮಿಕ ಬೆಂಕಿ:  8 ರಿಂದ10 ಮಂದಿ ನೌಕರರಿಗೆ ತೀವ್ರ ಗಾಯ.

ಬೆಂಗಳೂರು,ಆಗಸ್ಟ್,11,2023(www.justkannada.in):  ಬಿಬಿಎಂಪಿ ಮುಖ್ಯಕಚೇರಿಯ ಆವರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು 8 ರಿಂದ10 ಮಂದಿ ನೌಕರರಿಗೆ ತೀವ್ರ ಗಾಯಗಳಾಗಿದೆ.

ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಕಚೇರಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಸಿಬ್ಬಂದಿ ಮತ್ತು ಸಾರ್ವಜನಿಕರು ಜಮಾಯಿಸಿ ಬೆಂಕಿ ನಂದಿಸುತ್ತಿದ್ದಾರೆ. ಸದ್ಯ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.

ಬೆಂಕಿ ಹೊತ್ತಿ ಅರ್ಧಗಂಟೆಯಾದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: Accidental fire – BBMP -head office- premises: -8 to 10 employees – injured.